ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಭರ್ಜರಿ ಉಡುಗೊರೆ ನೀಡಿದ್ದು, ಇಂದಿನಿಂದ ಮಧ್ಯರಾತ್ರಿ 12ರವರೆಗೆ ಮೆಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮೆಟ್ರೋ ರೈಲು ಸಂಚರಿಸಲಿದೆ.
ಈ ಕುರಿತು ಮೆಟ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚೌಹಾನ್ ಮಾಹಿತಿ ನೀಡಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ಈ ನಿರ್ಧಾರ ಕೈಗೊಂಡಿದೆ. ನೇರಳೆ ಮಾರ್ಗದ ಮೆಟ್ರೋ ರೈಲುಗಳು ಬೈಯಪ್ಪನಹಳ್ಳಿಯಿಂದ-ಮೈಸೂರು ರಸ್ತೆ ಕಡೆಗೆ -ರಾತ್ರಿ 11.35, ಮೈಸೂರು ರಸ್ತೆಯಿಂದ-ಬೈಯಪ್ಪನಹಳ್ಳಿ ಕಡೆಗೆ ರಾತ್ರಿ 11.40, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ-ಬೈಯಪ್ಪನಹಳ್ಳಿ ಕಡೆಗೆ ರಾತ್ರಿ 12ಕ್ಕೆ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಿಂದ-ಮೈಸೂರು ರಸ್ತೆ ಕಡೆಗೆ ರಾತ್ರಿ 12.00ಕ್ಕೆ ಸಂಚರಿಸಲಿವೆ ಎಂದು ತಿಳಿಸಿದರು.
Advertisement
Advertisement
ಹಸಿರು ಮಾರ್ಗದ ರೈಲುಗಳು ನಾಗಸಂದ್ರದಿಂದ ಯಲಚೇನಹಳ್ಳಿ ಕಡೆಗೆ ರಾತ್ರಿ 11.25, ಯಲಚೇನಹಳ್ಳಿಯಿಂದ ನಾಗಸಂದ್ರಕ್ಕೆ ರಾತ್ರಿ 11.25, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಗಸಂದ್ರದ ಕಡೆಗೆ ರಾತ್ರಿ 12, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಕಡೆಗೆ ರಾತ್ರಿ 12, ಯಶವಂತಪುರದಿಂದ ನಾಗಸಂದ್ರದ ಕಡೆಗೆ ರಾತ್ರಿ 12.16ಕ್ಕೆ ಹಾಗೂ ಯಶವಂತಪುರದಿಂದ ಯಲಚೇನಹಳ್ಳಿ ಕಡೆಗೆ ರಾತ್ರಿ 11.37ಕ್ಕೆ ರೈಲು ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.
Advertisement
ಅಲ್ಲದೆ ಮೂರು ಬೋಗಿಗಳ ಎರಡು ರೈಲುಗಳನ್ನು ಆರು ಬೋಗಿಗಳಿಗೆ ಪರಿವರ್ತಿಸಲಾಗಿದ್ದು, ಈ ರೈಲುಗಳು ಹಸಿರು ಮಾರ್ಗದಲ್ಲಿ ಸಂಚರಿಸಲಿವೆ. ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳು 6 ಬೋಗಿಯ ರೈಲುಗಳು ಸಂಚರಿಸಲಿವೆ. ಶೇ.77ರಷ್ಟು ಸಮಯದಲ್ಲಿ ಆರು ಬೋಗಿಗಳು ಹಾಗೂ ಶೇ.23ರಷ್ಟು ಸಮಯದಲ್ಲಿ ಮೂರು ಬೋಗಿಗಳ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದರು.