ಬೆಂಗಳೂರು: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಾಚನಾ? ಅವರ ಮೇಲೆ ಆಡಿಯೋ ಹಗರಣ ಇದೆ. ಇದನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ನಮ್ಮ ನಮ್ಮ ಕರವೇ ಅಧ್ಯಕ್ಷ ಜಯರಾಜು ನಾಯ್ಡು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಗರದ ಮೌರ್ಯ ಸರ್ಕಲ್ ಬಳಿ ಮಾತನಾಡಿದ ಅವರು, ನಿನ್ನೆ ರಾತ್ರಿ ಮಿನರ್ವ ಸರ್ಕಲ್ ಬಳಿ ನಾವೆಲ್ಲ ಇದ್ದೆವು. ಅಲ್ಲಿ ಪೊಲೀಸ್ ಸರ್ಪಗಾವಲು ಇತ್ತು. ತಾಕತ್ತಿದ್ರೆ ನಮ್ಮನ್ನು ಬಂಧಿಸಿ ನೋಡೋಣ ಎಂದು ಕಮಿಷನರ್ ಭಾಸ್ಕರ್ ರಾವ್‍ಗೆ ನೇರ ಸವಾಲು ಹಾಕಿದರು. ಕಮಿಷನರ್ ಬಿಜೆಪಿ ಪರ ಕೆಲಸ ಮಾಡೋದಿದ್ರೆ ಡ್ರೆಸ್ ಬಿಚ್ಚಿ, ಆರ್‍ಎಸ್‍ಎಸ್‍ಗೆ ಇಲ್ಲ, ಬಿಜೆಪಿಗೆ ಸೇರಿ ಎಂದು ಕಿಡಿಕಾರಿದರು.
Advertisement
Advertisement
ಇನ್ನೂ ಸಿಎಂ ಮೇಲೆಯೂ ಕಿಡಿಕಾರಿ, ಸಿಎಂ ನಾಲಾಯಕ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಕನ್ನಡಿಗರ ಹೋರಾಟದ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರತಿಭಟನಾ ಸ್ಥಳಕ್ಕೆ ಬರಬೇಕಿತ್ತು ಎಂದು ಜಯರಾಜು ನಾಯ್ಡು ತಮ್ಮ ಆಕ್ರೋಶವನ್ನು ಹೊರಹಾಕಿದರು.
Advertisement
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‍ಗೆ ಕರೆ ನೀಡಲಾಗಿದೆ.