ಬೆಂಗಳೂರು: ರಾಜ್ಯಾದ್ಯಂತ ನಮ್ಮ ಕ್ಲಿನಿಕ್‍ಗಳನ್ನ ನಂಬರ್ 1 ಕ್ಲಿನಿಕ್‍ಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh GunduRao) ವಿಭಿನ್ನ ಪ್ರಯೋಗಗಳಿಗೆ ಕೈಹಾಕಿದ್ದಾರೆ. ನಗರ ಪ್ರದೇಶಗಳ ಬಡವರು ಹಾಗೂ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನ ನಮ್ಮ ಕ್ಲಿನಿಕ್ ಗಳ ಮುಖಾಂತರ ಒದಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಗಳಿಗೆ ಹೊಸ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗುತ್ತಿದೆ.
ಹೌದು, ಕಳೆದ ಬಿಜೆಪಿ ಸರ್ಕಾರ ಬಡವರಿಗಾಗಿ ತೆಗೆದಿರೋ ನಮ್ಮ ಕ್ಲೀನಿಕ್‍ಗಳಿಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಮೊದಲ ಹಂತವಾಗಿ ರಾಜ್ಯದಲ್ಲಿರುವ ನಮ್ಮ ಕ್ಲಿನಿಕ್‍ಗಳಲ್ಲಿ ಶೇ 25 ರಷ್ಟು ಕ್ಲಿನಿಕ್ ಗಳ ಸಮಯ ಬದಲಾವಣೆಗೆ ನಿರ್ಧರಿಸಲಾಗಿದೆ. ನಮ್ಮ ಕ್ಲಿನಿಕ್‍ಗಳು ಬೆಳಗ್ಗೆ 9 ಗಂಟೆಗೆ ತೆರದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಕ್ಲೋಸ್ ಮಾಡಲಾಗುತ್ತಿತ್ತು. ಇದೀಗ ನಮ್ಮ ಕ್ಲಿನಿಕ್‍ಗಳನ್ನ (Namma Clinic) ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: BJP ಸಂಸದರಿಗೆ ರಾಗಾ ಫ್ಲೈಯಿಂಗ್ ಕಿಸ್ – ಅದು ಪ್ರೀತಿಯ ಸನ್ನೆ ಎಂದು ಶಿವಸೇನೆ ಸಂಸದೆ ಸಮರ್ಥನೆ
Advertisement
Advertisement
ಇನ್ಮೇಲೆ ನಮ್ಮ ಕ್ಲಿನಿಕ್‍ಗಳನ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಓಪನ್ ಮಾಡಲು ಕಾರ್ಯಯೋಜನೆ ಸಿದ್ದಮಾಡಲಾಗಿದೆ. ರಾತ್ರಿಯವರೆಗೂ ನಮ್ಮ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು. ಹೊಸ ಟೈಮಿಂಗ್ಸ್ ಪ್ರಕಾರ ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್‍ಗಳು ತೆರೆಯಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ.25 ರಷ್ಟು ಕ್ಲಿನಿಕ್‍ಗಳನ್ನ ಪ್ರಾಯೋಗಿಕ ಹಂತದಲ್ಲಿ ಸಮಯ ಬದಲಾವಣೆ ಮಾಡಲಾಗ್ತಿದೆ.
Advertisement
Advertisement
ಸಮಯ ಬದಲಾವಣೆ ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ನಮ್ಮ ಕ್ಲಿನಿಕ್‍ಗಳ ಸಮಯವನ್ನ ಬದಲಾವಣೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ…ಒಟ್ನಲ್ಲಿ ನಮ್ಮ ಕ್ಲೀನಿಕ್ ಸಮಯ ಬದಲಾವಣೆ ಮಾಡ್ತಿರೋದು ಸಂಜೆ ವೇಳೆಯಲ್ಲೂ ಓಪನ್ ಇರೋ ಪ್ಲಾನ್ ಒಳ್ಳೆಯ ಬೆಳವಣಿಗೆಯಾಗಿದೆ.
Web Stories