ಅವಲಕ್ಕಿ ದೇಸೀ ಆಹಾರ. ಇದಕ್ಕೆ ಪಾಶ್ಚಿಮಾತ್ಯ ಟ್ವಿಸ್ಟ್ ನೀಡಿ ಕೇಕ್ ಮಾಡೋದು ಹೇಗೆ ಗೊತ್ತಾ? ಈ ಕೇಕ್ ಸಿಹಿಯಾಗಿಲ್ಲ. ಬದಲಾಗಿ ಲಘುವಾಗಿ ಖಾರ ಹಾಗೂ ಉಪ್ಪೆನಿಸುವುದರಿಂದ ಇದನ್ನು ನೀವು ನಮ್ಕೀನ್ ಕೇಕ್ ಎಂತಲೂ ಕರೆಯಬಹುದು. ಅವಲಕ್ಕಿಯಿಂದ ಕೇಕ್ ಹೇಗೆ ಮಾಡೋದು ಎಂದು ನೋಡೋಣ.
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 350 ಗ್ರಾಂ
ಬ್ರೆಡ್ – 6 ಸ್ಲೈಸ್
ಅಕ್ಕಿ ಹಿಟ್ಟು – 400 ಗ್ರಾಂ
ಹಸಿರು ಮೆಣಸಿನಕಾಯಿ – 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ರೆಡ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಈರುಳ್ಳಿ – 1 ಕಪ್
ಚಾಟ್ ಮಸಾಲಾ – 1 ಟೀಸ್ಪೂನ್
ಮೊಸರು – 5 ಟೀಸ್ಪೂನ್ ಇದನ್ನೂ ಓದಿ: ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್ನಲ್ಲಿ ಗೆಣಸು ಮನೆಯಲ್ಲೇ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪೋಹಾವನ್ನು ನೀರಿನಲ್ಲಿ ನೆನೆಸಿ, ತೊಳೆದು, ಒಂದು ಬಟ್ಟಲಿಗೆ ವರ್ಗಾಯಿಸಿ.
* ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು, ಅದರ ಬದಿಗಳನ್ನು ಕತ್ತರಿಸಿ.
* ನಂತರ ಅದನ್ನು ನೀರಿನಲ್ಲಿ ನೆನೆಸಿ, ಅವಲಕ್ಕಿಯನ್ನು ಬಟ್ಟಲಿಗೆ ತುಂಡುಗಳಾಗಿ ಮಾಡಿ ಸೇರಿಸಿ.
* ಅದಕ್ಕೆ ಅಕ್ಕಿ ಹಿಟ್ಟು, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರೆಡ್ ಚಿಲ್ಲಿ ಫ್ಲೇಕ್ಸ್, ಹೆಚ್ಚಿದ ಈರುಳ್ಳಿ, ಚಾಟ್ ಮಸಾಲಾ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಮೊಸರು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಒಂದು ಟ್ರೇ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಈಗ ಮಿಶ್ರಣವನ್ನು ಅದರಲ್ಲಿ ಸುರಿದು ರೆಫ್ರಿಜರೇಟರ್ನಲ್ಲಿ 10 ನಿಮಿಷ ಸೆಟ್ ಆಗಲು ಬಿಡಿ.
* ಈಗ ಅದನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
* ಈಗ ಶ್ಯಾಲೋ ಫ್ರೈಗೆ ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಅವಲಕ್ಕಿ ಕ್ಯೂಬ್ಗಳನ್ನು ಹಾಕಿ ಬೇಯಿಸಿಕೊಳ್ಳಿ.
* ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಅವಲಕ್ಕಿಯಿಂದ ಮಾಡಿದ ನಮ್ಕೀನ್ ಕೇಕ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ
Advertisement
Web Stories