ಚೆನ್ನೈ: ಕೆಲ ದಿನಗಳ ಹಿಂದೆಯಷ್ಟೇ ನಟಿ ನಮಿತಾ ಶರತ್ ಬಾಬು ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ವದಂತಿ ಸುದ್ದಿ ಪ್ರಕಟವಾಗಿತ್ತು. ಇದಾದ ಬಳಿಕ ಈ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿತ್ತು. ಆದರೆ ಈಗ ಅಧಿಕೃತವಾಗಿ ನಮಿತಾ ಮದುವೆಯಾಗುವ ಸುದ್ದಿ ಪ್ರಕಟವಾಗಿದೆ.
ಹೌದು, ಇದೇ 24ರಂದು ಕಾಲಿವುಡ್, ಸ್ಯಾಂಡಲ್‍ವುಡ್ ನಟಿ ನಮಿತಾ ಮದುವೆಯಾಗಲಿದ್ದಾರೆ. ನಾನು ವೀರೇಂದ್ರ ಚೌಧರಿ ಅವರನ್ನು ಮದುವೆಯಾಗುತ್ತೇನೆ ಎಂದು ನಮಿತಾ ಹೇಳಿದ್ದಾರೆ.
ನಮಿತಾ ಗೆಳತಿ, ತಮಿಳು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೈಜಾ ವಿಲ್ಸನ್ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಈ ವಿಡಿಯೋದಲ್ಲಿ ನಮಿತಾ ತಾನು ಮದುವೆಯಾಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ವೀರೇಂದ್ರ ಚೌಧರಿ ಮಾಡೆಲ್, ಮತ್ತು ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ
2002ರಲ್ಲಿ ತೆಲುಗಿನ ‘ಸ್ವತಂ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಮಿತಾ ರವಿಚಂದ್ರನ್ ಅಭಿನಯದ ನೀಲಕಂಠದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟರು. ಬಳಿಕ ದರ್ಶನ್ ಜೊತೆಗೆ ಇಂದ್ರದಲ್ಲೂ ಅಭಿನಯಿಸಿದ್ದರು. ಹೂ, ನಮಿತಾ ಐ ಲವ್ ಯೂ, ಬೆಂಕಿಬಿರುಗಾಳಿಯಲ್ಲೂ ಅಭಿನಯಿಸಿದ್ದರು.
ವಿಜಯ್, ಅಜಿತ್, ಮೋಹನ್‍ಲಾಲ್, ಶರತ್ ಕುಮಾರ್, ವೆಂಕಟೇಶ್, ಸತ್ಯರಾಜ್ ಜೊತೆ ನಮಿತಾ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮಿತಾ ಅಭಿನಯಿಸಿದ್ದಾರೆ.
So happy to announce ❤❤❤ #happilyeverafter #namveer #namveerwedding pic.twitter.com/myGPyPd7Sn
— Raiza Wilson (@raizawilson) November 9, 2017