Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಸ್ಟಿಸ್ ಹೇಮಾ ವರದಿಯಲ್ಲಿಯ ಹೆಸರು ಬಹಿರಂಗ ಪಡಿಸಿ: ಪೃಥ್ವಿರಾಜ್ ಸುಕುಮಾರನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಜಸ್ಟಿಸ್ ಹೇಮಾ ವರದಿಯಲ್ಲಿಯ ಹೆಸರು ಬಹಿರಂಗ ಪಡಿಸಿ: ಪೃಥ್ವಿರಾಜ್ ಸುಕುಮಾರನ್

Cinema

ಜಸ್ಟಿಸ್ ಹೇಮಾ ವರದಿಯಲ್ಲಿಯ ಹೆಸರು ಬಹಿರಂಗ ಪಡಿಸಿ: ಪೃಥ್ವಿರಾಜ್ ಸುಕುಮಾರನ್

Public TV
Last updated: August 26, 2024 7:01 pm
Public TV
Share
4 Min Read
prithviraj sukumaran 1
SHARE

ಮಲಯಾಳಂ ಸಿನಿಮಾ ರಂಗದಲ್ಲಿನ ಲೈಂಗಿಕ ದೌರ್ಜನ್ ವರದಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜಸ್ಟಿಸ್‍ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಕೂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‍ ಮಾತಾಡಿದ್ದಾರೆ.

Prithviraj Sukumaran

ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್‍ (Prithviraj Sukumaran) , ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.

prithviraj sukumaran 3

ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.

prithviraj sukumaran 2

ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿವೆ.

Mohanlal Prithviraj Sukumar 1

ಏನಿದೆ ಜಸ್ಟಿಸ್ ಹೇಮಾ ವರದಿಯಲ್ಲಿ?

ಮಲಯಾಳಂ (Malayalam) ಸಿನಿಮಾ ರಂಗದಲ್ಲಿ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಲೈಂಗಿಕ ದೌರ್ಜನ್ಯದ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು (Hema Report) ರಚಿಸಿತ್ತು. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರೋ ಅಂಶಗಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.

Hema Report

ಮಲಯಾಳಂ ಸಿನಿಮಾ ರಂಗ (Film Industry) ಕೆಲವು ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ, ಯಾವ ನಟಿಯರಿಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು, ಇಲ್ಲ ಚಿತ್ರೋದ್ಯಮವನ್ನು ತೊರೆಯಬೇಕು ಅನ್ನು ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ ಅನ್ನೋ ಅಂಶವೂ ಸೇರ್ಪಡೆಯಾಗಿದೆ.  ವರದಿಯ ಅಧ್ಯಯನದ ಸಂದರ್ಭದಲ್ಲಿ ಮಲಯಾಳಂ ಚಿತ್ರೋದ್ಯಮವು ಕೆಲ ನಿರ್ಮಾಪಕರ, ನಿರ್ದೇಶಕರ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಇದಿಷ್ಟೇ ಜನರು ಮಲಯಾಳಂ ಚಿತ್ರೋದ್ಯಮವನ್ನ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು  ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

Siddique 2

ಮಹಿಳೆಯರು ಚಿತ್ರೋದ್ಯಮಕ್ಕೆ ಹಣ ಮಾಡಲು ಬರುತ್ತಿದ್ದಾರೆ. ಹಾಗಾಗಿ ಅವರು ಎಲ್ಲದಕ್ಕೂ ರೆಡಿ ಆಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದು ನಿಜವಾದದ್ದು ಅಲ್ಲ. ಕಲೆ ಮತ್ತು ನಟನೆಯ ಮೇಲಿನ ಆಸಕ್ತಿ ಕಾರಣದಿಂದಾಗಿ ಮಹಿಳೆಯರು ಸಿನಮಾ ರಂಗಕ್ಕೆ ಬರುತ್ತಿದ್ದಾರೆ. ಕೆಲವರು ಅವಕಾಶ ಪಡೆಯಲು ಅಡ್ಡದಾರಿಯನ್ನೂ ಹಿಡಿದಿದ್ದಾರೆ ಎಂದಿದೆ ವರದಿ. ಇದರ ಜೊತೆಗೆ ತಮ್ಮ ನಿಯಮಗಳಿಗೆ ಒಪ್ಪುವಂಥ ಮಹಿಳೆಯರ ಗುಂಪು ಕೂಡ ಅಲ್ಲಿ ರಚನೆಯಾಗಿದ್ದು, ಅವರನ್ನು ಕೋಡ್‍್ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಷ್ಟೋ ಮಹಿಳಯರು ಪಾತ್ರಗಳಿಗಾಗಿ ಈ ರೀತಿ ಗುಂಪಿಗೆ ಸೇರಿದ್ದಾರೆ ಅನ್ನೋ ಆತಂಕಕಾರಿ ಅಂಶ ಕೂಡ ವರದಿಯಲ್ಲಿದೆ. ನಟಿಯೊಬ್ಬಳು ನಟನಿಂದ ದೌರ್ಜನ್ಯಕ್ಕೆ ಒಳಗಾಗಿ, ಮರುದಿನವೇ ಆಕೆ ಆತನೊಂದಿಗೆ ಪತ್ನಿಯಾಗಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆಘಾತದಲ್ಲಿದ್ದ ನಟಿಯು ಆ ದೃಶ್ಯವನ್ನು ಎದುರಿಸೋಕೆ ಆಗದೇ 17 ಟೇಕ್‍ ಗಳನ್ನು ತೆಗೆದುಕೊಂಡಳು. ಮತ್ತು ಅವನನ್ನು ಎದುರಿಸೋಕೆ ಆಗದೇ ದೃಶ್ಯ ಮುಗಿಸಲು ಹರಸಾಹಸ ಪಟ್ಟಳು. ಆ ದೃಶ್ಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂಥ ದೃಶ್ಯವಿತ್ತು. ನಿಜಕ್ಕೂ ಅದು ಭಯಾನಕ ಆಗಿತ್ತು ಎಂದು ಆ ನಟಿ ಹೇಳಿಕೊಂಡಿದ್ದಾಳೆ.

siddique 1

ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮನೆ ಬಾಗಿಲುಗಳು ಅಥವಾ ತಂಗಿದ ಸ್ಥಳಗಳ ಬಾಗಿಲುಗಳು ಬಡಿದುಕೊಳ್ಳುತ್ತಲೇ ಇರುತ್ತವೆ. ನಟಿಯರು ಸ್ಪಂದಿಸದೇ ಹೋದರೆ, ಬಾಗಿಲು ಬಡಿತ  ಇನ್ನೂ ಜೋರಾಗುತ್ತವೆ ಎಂದು ಮತ್ತೋರ್ವ ನಟಿಯೊಬ್ಬರು ಸಮಿತಿಯ ಮುಂದೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೀವಭಯ ಕಾರಣದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಸಾಕಷ್ಟು ಜನರು ಹಿಂದೇಟು ಹಾಕಿದ್ದಾರೆ ಅಂತಿದೆ ವರದಿ. ಧೈರ್ಯದಿಂದ ದೂರು ನೀಡಿದರೆ, ಆ ನಟಿಯ ಬದುಕೇ ಮುಗಿದು ಹೋಗುತ್ತದೆ ಅನ್ನೋ ಅಂಶ ಕೂಡ  ಉಲ್ಲೇಖವಾಗಿದೆ. ನಟಿಯ ವೃತ್ತಿ ಜೀವನ ಮುಗಿಸುವುದರ ಜೊತೆಗೆ ಆ ಕುಟುಂಬಗಳನ್ನು ಗುರಿಯಾಗಿಸಿ ನಿತ್ಯ ಬೆದರಿಕೆ ಹಾಕಲಾಗುತ್ತದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖ  ಮಾಡಲಾಗಿದೆ. ಕುಟುಂಬಕ್ಕೆ ಬೆದರಿಕೆ ಜೊತೆಗೆ ಮತ್ತೆ ಅವಕಾಶ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅನೇಕ ನಟಿಯರು ಮೌನಕ್ಕೆ ಜಾರಿದ್ದಾರಂತೆ.

 

ಜ್ಯೂನಿಯರ್ ಆರ್ಟಿಸ್ಟ್ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಲೈಂಗಿಕ ಹೊಂದಾಣಿಕೆ ಇರದೇ ಹೋದರೆ ಜ್ಯೂನಿಯರ್ ಕಲಾವಿದರಿಗೆ ಅವಕಾಶವೇ ಸಿಗೋದಿಲ್ಲ ಅಂತಿದೆ ವರದಿ. ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ಜ್ಯೂನಿಯರ್ ಆರ್ಟಿಸ್ಟ್ ಸಂಯೋಜಕರು ಮತ್ತು ಮ್ಯಾನೇಜರ್ ಗಳು ನಿತ್ಯ ಕಿರುಕುಳ ನೀಡುತ್ತಲೇ ಇರುತ್ತಾರೆ. ಕೆಲಸ ಬೇಕು ಅಂದರೆ ಸಹಕರಿಸಲೇಬೇಕು ಅಂತಿದೆ ವರದಿ.

TAGGED:Hema ReportmalayalamPrithviraj Sukumaranಪೃಥ್ವಿರಾಜ್ ಸುಕುಮಾರನ್ಮಲಯಾಳಂಹೇಮಾ ವರದಿ
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Strait of Hormuz Indian Ships
Latest

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸಬೇಡಿ: ಇರಾನ್‌

Public TV
By Public TV
10 minutes ago
head cook killed by being attacked with a snooker stick in sagar shivamogga
Crime

ಸ್ನೂಕರ್‌ ಸ್ಟಿಕ್‌ನಲ್ಲಿ ಹಲ್ಲೆ ಮಾಡಿ ಹೆಡ್‌ಕುಕ್‌ ಹತ್ಯೆ – ಶವ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ

Public TV
By Public TV
17 minutes ago
shreyas patel
Latest

ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರಕ್ಕೆ ಮನವಿ

Public TV
By Public TV
41 minutes ago
Chikkaballapura Car Accident
Chikkaballapur

ಟೆಕ್ಕಿ ದಂಪತಿ ಹೊರಟಿದ್ದ ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸಾವು, ಪತಿ ಸ್ಥಿತಿ ಗಂಭೀರ

Public TV
By Public TV
43 minutes ago
RCB Fans Bengaluru Chinnaswamy
Bengaluru City

ಐಪಿಎಲ್ ನಕಲಿ ಟಿಕೆಟ್ ದಂಧೆಗೆ ಬೆಂಗಳೂರು ಪೊಲೀಸರ ಡಿಜಿಟಲ್ ಬ್ರೇಕ್!

Public TV
By Public TV
2 hours ago
Supreme Court 1
Court

ಜಡ್ಜ್‌ಗಳ ಮೇಲೆ ಪೂರ್ವಯೋಜಿತ ದಾಳಿ – ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸುಪ್ರೀಂ ಕೆಂಡಾಮಂಡಲ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?