– ರಾಹುಲ್ ಗಾಂಧಿ ಹೆಸರಿನ ಯುವಕನ ಕಥೆ
ಇಂದೋರ್: ಒಂದೇ ಊರಿನಲ್ಲಿ ಒಂದೇ ಹೆಸರಿನ ಇಬ್ಬರಿದ್ರೆ ತೊಂದರೆ ಆಗೋದು ಸಾಮನ್ಯ. ಓರ್ವನಿಗೆ ಬಂದ ಪತ್ರ ಮತ್ತೋರ್ವನ ಮನೆ ತಲುಪಿರುತ್ತೆ. ಪ್ರಮುಖ ನಾಯಕರ ಹೆಸರಿದ್ದರೆ ಆತ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾನೆ. ಕೆಲವೊಮ್ಮೆ ಇಂತಹ ಹೆಸರುಗಳು ಸಮಸ್ಯೆಗಳಾಗುತ್ತವೆ. ಮಧ್ಯಪ್ರದೇಶದ ಇಂದೋರ್ ನಿವಾಸಿ 23ರ ಯುವಕನ ಹೆಸರು ರಾಹುಲ್ ಗಾಂಧಿ. ಯುವಕನ ಹೆಸರು ಕೇಳುತ್ತಲೇ ಯಾವ ಕಂಪನಿಗಳು ಸಿಮ್ ನೀಡುತ್ತಿಲ್ಲ. ನಕಲಿ ಪ್ರಮಾಣಪತ್ರವೆಂದು ತಿಳಿದು ಕೆಲ ಬ್ಯಾಂಕ್ ಗಳು ಯುವಕನಿಗೆ ಲೋನ್ ನೀಡಿಲ್ಲ.
ಯುವಕನಿಗೆ ಇದೀಗ ತನ್ನ ಹೆಸರು ದೊಡ್ಡ ಸಮಸ್ಯೆಯಾಗಿದೆ. 23 ವರ್ಷದ ರಾಹುಲ್ ಗಾಂಧಿ ತಂದೆ ರಾಜೇಶ್ ಗಾಂಧಿ ಇಂದೋರ್ ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಾರೆ. ಪುತ್ರ ಮತ್ತು ಕುಟುಂಬದೊಂದಿಗೆ ಇಂದೋರ್ ನ ಎರೊಡ್ರಮ್ ರಸ್ತೆಯ ಅಖಂಡನಗರದಲ್ಲಿ ವಾಸವಾಗಿದ್ದಾರೆ. ರಾಹುಲ್ ಗಾಂಧಿ ನನ್ನ ಹೆಸರು ಹೇಳಿದ್ರೆ ಯಾವ ಕಂಪನಿಗಳು ಸಿಮ್ ನೀಡುತ್ತಿಲ್ಲ. ನನ್ನ ಎಲ್ಲ ದಾಖಲಾತಿಗಳಲ್ಲಿ ರಾಹುಲ್ ಗಾಂಧಿ ಎಂದೇ ಉಲ್ಲೇಖವಾಗಿದೆ ಎಂದು ಹೇಳಿದ್ರೂ ಬಹುತೇಕರು ಹಾಸ್ಯ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಕೊನೆಗೆ ಸೋದರನ ದಾಖಲೆಯಿಂದ ಸಿಮ್ ಪಡೆದಿದ್ದೇನೆ. ಮೊಬೈಲ್ ಅಥವಾ ಯಾವುದೇ ವಸ್ತು ಖರೀದಿಸಿದ್ರೂ ಸೋದರನ ಹೆಸರಿನಲ್ಲಿಯೇ ಬಿಲ್ ಮಾಡಿಸುತ್ತೇನೆ ಎಂದು ಯುವಕ ಹೇಳುತ್ತಾನೆ.
Advertisement
Advertisement
ಒಮ್ಮೆ ಕಾರ್ ಲೋನ್ ಪಡೆದುಕೊಳ್ಳಲು ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿದ್ದೆ. ಆರಂಭದಲ್ಲಿ ಕಂಪನಿಯ ಲೋನ್ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ನನ್ನ ಪರಿಚಯ ಮಾಡಿಕೊಂಡಾಗ ನಕ್ಕ ಅಧಿಕಾರಿ ನಮ್ಮೊಂದಿಗೆ ಕಾಲಹರಣ ಮಾಡಬೇಡಿ ಎಂದು ಕರೆ ಕಟ್ ಮಾಡಿದರು. ಹೆಸರಿನ ಗೊಂದಲದಿಂದಾಗಿ ಇದೂವರೆಗೂ ಡ್ರೈವಿಂಗ್ ಲೈಸನ್ಸ್ ಸಹ ಆಗಿಲ್ಲ. ಹೆಸರಿನ ಮುಂದಿರುವ ಗಾಂಧಿ ತೆಗೆದು ನಮ್ಮ ಸಮಾಜದ ಹೆಸರು ಮಾಳವೀಯ ಎಂದು ಬರೆಸಿ ಎಲ್ಲ ದಾಖಲೆಗಳ ತಿದ್ದುಪಡಿಗೆ ಮುಂದಾಗಿದ್ದೇನೆ ಎಂದು ಯುವಕ ರಾಹುಲ್ ತಿಳಿಸಿದ್ದಾನೆ.
Advertisement
ತಂದೆ ರಾಜೇಶ್ ಮೊದಲಿಗೆ ಬಿಎಸ್‍ಎಫ್ ನಲ್ಲಿ ವಾಟರ್ ಮ್ಯಾನ್ ಆಗಿದ್ದರು. ಅಲ್ಲಿಯ ಸಿಬ್ಬಂದಿ ಇವರನ್ನು ಗಾಂಧಿ ಎಂದು ಕರೆಯುತ್ತಿದ್ದರು. ಹೀಗೆ ಗಾಂಧಿ ಎಂದೇ ಚಿರಪರಿಚಿತರಾದ ಕೂಡಲೇ ರಾಜೇಶ್ ಸಹ ತಮ್ಮ ಹೆಸರಿನ ಮುಂದೆ ಗಾಂಧಿ ಎಂದು ಬರೆಯಲು ಆರಂಭಿಸಿದರು. ಮಕ್ಕಳ ಶಾಲೆಯ ನೋಂದಣಿ ಸಮಯದಲ್ಲಿ ಹೆಸರಿನ ಮುಂದೆ ಗಾಂಧಿ ಎಂದು ದಾಖಲಿಸಿದ್ದಾರೆ.