– ಕೋಲಾರವನ್ನು ಬೆಂಗಳೂರು ಪೂರ್ವ ಮಾಡ್ತೀರಾ?
– ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡ್ತೀರಾ?
ರಾಮನಗರ: ಬೆಂಗಳೂರು ದಕ್ಷಿಣ (Bengaluru South) ಅಂತ ಹೆಸರು ಬದಲಾವಣೆಗೆ ಖಂಡತುಂಡವಾಗಿ ವಿರೋಧ ಮಾಡುತ್ತೇವೆ. ಯಾವುದೇ ಡಿಕ್ಷನರಿ ನೋಡಿದರೂ ರಾಮನಗರಕ್ಕಿಂತ (Ramanagara) ಒಳ್ಳೆಯ ಪದ ಬೇರೊಂದು ಸಿಗುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರದ ಬಿಜೆಪಿ ಸಂಸದ ಡಾ ಮಂಜುನಾಥ್ (Dr. CN Manjunath) ಹೇಳಿದ್ದಾರೆ.
Advertisement
ರಾಮನಗರ ಜಿಲ್ಲೆಗೆ ಮರುನಾಮಕರಣ ವಿಚಾರ ಕುರಿತು ಮಾಗಡಿಯಲ್ಲಿ (Magadi) ಮಾತನಾಡಿದ ಅವರು, ಆ ಹೆಸರಿಗೆ ಭಾವನಾತ್ಮಕ, ಧಾರ್ಮಿಕ, ಪೌರಾಣಿಕ ಸಂಬಂಧ ಇದೆ. ಕೇವಲ ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗುವುದಿಲ್ಲ ಎಂದರು. ಇದನ್ನೂ ಓದಿ: ಗ್ರಾಮೀಣ ಭಾಗಗಳಲ್ಲಿ ಟೆಲಿಕಾಂ ಸಂಪರ್ಕ ಸುಧಾರಣೆಗೆ ‘ಡಿಜಿಟಲ್ ಭಾರತ್ ನಿಧಿ’ – ಏನಿದು ಯೋಜನೆ?
Advertisement
Advertisement
ಬೆಂಗಳೂರು ನಗರದ ಒಳಗೆ ಬೆಂಗಳೂರು ದಕ್ಷಿಣ ತಾಲೂಕು ಇದೆ. ಇನ್ನೊಂದು ಬೆಂಗಳೂರು ದಕ್ಷಿಣ ಜಿಲ್ಲೆ ಅಂದರೆ ಜನರಿಗೆ ಗೊಂದಲ ಆಗುತ್ತದೆ. ಈ ರೀತಿ ಮಾಡುವುದಾದರೆ ʼಬ್ರಾಂಡ್ ರಾಮನಗರʼ ಎಂದು ಅಭಿವೃದ್ಧಿ ಮಾಡಿ. ಮುಂದೆ ಕೋಲಾರವನ್ನು ಬೆಂಗಳೂರು ಪೂರ್ವ ಜಿಲ್ಲೆ ಮಾಡ್ತೀರಾ? ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಮಾಡ್ತೀರಾ ಎಂದು ಪ್ರಶ್ನೆ ಕೇಳಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್ ಕಟ್
Advertisement
ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು ಅಲ್ಲೇ ಸಾಕಷ್ಟು ಮೂಲಭೂತ ಸಮಸ್ಯೆಗಳಿದೆ. ಭೂಮಿಗೆ ಬೆಲೆ ಜಾಸ್ತಿ ಆದರೆ ಪ್ರಯೋಜನ ಇಲ್ಲ. ಭೂಮಿಯಲ್ಲಿ ಬೆಳೆಯುವ ಬೆಳೆಗೆ ಬೆಲೆ ಜಾಸ್ತಿ ಆಗಬೇಕು. ಯಾವ ಉದ್ದೇಶಕ್ಕೆ ಈ ರೀತಿ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು.
ರಾಮನಗರ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಇದು ರೇಷ್ಮೆನಾಡಾಗಿಯೇ ಉಳಿಯಬೇಕು. ರೈತರ ಜಿಲ್ಲೆಯಾಗಿಯೇ ಉಳಿಯಬೇಕು. ಇದು ವೈಜ್ಞಾನಿಕವಾಗಿಯೂ ಸಮಂಜಸ ಅಲ್ಲ ಎಂದು ಎಂದು ಹೇಳಿದರು.