ಗದಗ: ಜಾತಿಗಣತಿ (Caste Census) ಮೂಲಕ ನಿಖರ ಸಂಖ್ಯೆ ಮುಚ್ಚಿಟ್ಟು, ಕೆಲ ಸಮುದಾಯದ ಹಕ್ಕು ಕಸಿದುಕೊಳ್ಳುವ ಹುನ್ನಾರ ಸರ್ಕಾರ ಮಾಡುತ್ತಿದೆ ಎಂದು ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮೀಜಿ ಕಿಡಿಕಾರಿದರು.
ಗದಗದಲ್ಲಿ (Gadag) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಿಂದ ನೇಕಾರ, ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯವಾಗಿದೆ. ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ. ನೇಕಾರ, ಕುರುಹಿನಶೆಟ್ಟಿ ಸಮಾಜದ ಜನಸಂಖ್ಯೆ ಸುಮಾರು 12 ಲಕ್ಷಕ್ಕೂ ಅಧಿಕ ಇದೆ. ಆದರೆ ಸರ್ಕಾರದ ವರದಿಯಲ್ಲಿ ಒಂದೂವರೆ ಲಕ್ಷ ಇದೆ ಈ ಜಾತಿ ಜನಗಣತಿ ಸರಿಯಾಗಿ ಮಾಡಿಲ್ಲ. ನಿಖರವಾದ ಜಾತಿ ಜನಗಣತಿಯಾಗಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್ ಆಗಬಾರದು: ಧನಕರ್ ಅಸಮಾಧಾನ
ಹತ್ತು ವರ್ಷದ ಹಿಂದೆ ಮಾಡಿದ ಗಣತಿ ಪ್ರಸ್ತುತವಾಗುವುದಿಲ್ಲ. ನಮ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವುದಕ್ಕೆ ಇಂತಹ ಅವೈಜ್ಞಾನಿಕ ವರದಿಯೇ ಕಾರಣ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಾಯ್ಲೆಟ್‌ಗೆ ಹೋಗಿದ್ದವಳು ಕೊನೆ ಕ್ಷಣದಲ್ಲಿ ಹಾಜರ್ – ಸಿಇಟಿಯಲ್ಲಿ ನಕಲಿ ವಿದ್ಯಾರ್ಥಿ, ತನಿಖೆಗೆ ಆದೇಶ
ಸಿಎಂ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ನೀಡಿಲ್ಲ. ಸರಿಯಾಗಿ ಜಾತಿ ಜನಗಣತಿ ಮಾಡಿ, ಎಲ್ಲಾ ಸಮಾಜಕ್ಕೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.