ಬೆಂಗಳೂರು: ಸಿದ್ದರಾಮೋತ್ಸವ ಮಾಡ್ತಿರೋದು ನಮಗೆ ಖುಷಿಯಾಗಿದೆ. ಸಿದ್ದರಾಮಣ್ಣ ಇನ್ನೊಂದು ನಾಲ್ಕೈದು ಲಕ್ಷ ಜನ ಸೇರಿಸಲಿ. ಬೇಕಾದರೆ ಇದಕ್ಕೆ ನಾವೂ ಸಹ ಸಹಕಾರ ಕೊಡ್ತೇವೆ. ಸಿದ್ದರಾಮೋತ್ಸವದಿಂದ ನಮಗೇನೂ ಹೊಟ್ಟೆಕಿಚ್ಚಾಗಿಲ್ಲ. ಆದರೆ ಡಿಕೆಶಿ ಅವರು ಮಲಗುತ್ತಿಲ್ಲ. ಸಿದ್ದರಾಮೋತ್ಸವ ಬಿಜೆಪಿ ವಿರುದ್ಧ ಮಾಡ್ತಿಲ್ಲ. ಸಿದ್ದರಾಮೋತ್ಸವ ಮಾಡ್ತಿರೋದು ಡಿಕೆಶಿಯ ವಿರುದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
Advertisement
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಮಾಡ್ತಿರೋದಿಕ್ಕೆ ಡಿಕೆಶಿಗೆ ನಿದ್ದೆ ಇಲ್ಲ. ಡಿಕೆಶಿಯನ್ನು ಮುಗಿಸುವುದು ಸಿದ್ದರಾಮಯ್ಯ ತಂತ್ರಗಾರಿಕೆ. ಕಾಂಗ್ರೆಸ್‍ನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಹೈಕಮಾಂಡ್‍ಗೆ ತಮ್ಮ ಶಕ್ತಿ ತೋರಿಸಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಸೃಷ್ಟಿಸುತ್ತಿದ್ದಾರೆ. ಡಿಕೆಶಿಯನ್ನು ಮುಗಿಸೋದು ಸಿದ್ದರಾಮಯ್ಯ ತಂತ್ರ. ಈಗಾಗಲೇ ಜನತಾ ದಳವನ್ನು ಸಿದ್ದರಾಮಯ್ಯ ಮುಗಿಸಿದರು. ಕಾಂಗ್ರೆಸ್‍ಗೆ ಬಂದು ನಿಜವಾದ ಕಾಂಗ್ರೆಸಿಗರನ್ನು ಹೊರಗಿಟ್ರು. ದಲಿತ ಸಿಎಂ ಆಗಬೇಕಾಗಿದ್ದ ಖರ್ಗೆಯವರನ್ನು ಹೊರಗಿಟ್ರು. ಪರಮೇಶ್ವರ್ ಅವರನ್ನು ಸೋಲಿಸಿದ್ರು. ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ಮಾಡ್ತಿದ್ದಾರೆ. ಸಿದ್ದರಾಮೋತ್ಸವದಿಂದ ನಮಗೇನೂ ಭಯ ಇಲ್ಲ. ಡಿಕೆಶಿ ಅವರಿಗೆ ಭಯ ಇದೆ. ಡಿಕೆಶಿ ನಿದ್ದೆ ಕೆಡಿಸಿದ್ದಾರೆ ಸಿದ್ದರಾಮಯ್ಯ. ಇನ್ನಷ್ಟು ಜನ ಸೇರಿಸಲು ನಾವು ಸಿದ್ದರಾಮಯ್ಯಗೆ ಇನ್ನಷ್ಟು ಬೆಂಬಲ ಕೊಡ್ತೇವೆ. ಇದನ್ನೂ ಓದಿ: 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ
Advertisement
Advertisement
ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದ ಮರುದಿನವೇ ರಾಜೀನಾಮೆ ಕೊಡಬೇಕಿತ್ತು. ಅವರ ಕಾಲಘಟ್ಟದಲ್ಲಿ ಹಗರಣಗಳ ರಾಶಿಯೇ ಬಿದ್ದಿತ್ತು. ಡಿಕೆ ರವಿ, ಗಣಪತಿಯಂಥ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ್ರು. ಮೂರ್ನಾಲ್ಕು ಡಿವೈಎಸ್‍ಪಿಗಳು ರಾಜೀನಾಮೆ ಕೊಟ್ಟರು. ಅರ್ಕಾವತಿ ಹಗರಣ ಆಯ್ತು. ಸಿದ್ದರಾಮಯ್ಯ ಸಾಮರ್ಥ್ಯವೇ ಇಲ್ಲದೇ ಸಿಎಂ ಆಗಿದ್ರು. ಅವರ ಸರ್ಕಾರದಲ್ಲಿ ಹಗರಣಗಳೇ ತುಂಬಿದ್ದವು. ಒಬ್ಬ ಸಚಿವರ ಮೇಲೂ ಅವರು ಕ್ರಮ ಕೈಗೊಳ್ಳಲಿಲ್ಲ. ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸಿಎಂ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ. ನಮ್ಮ ಸರ್ಕಾರ ಡ್ರಗ್ಸ್ ಮಾಫಿಯಾ ಕಂಟ್ರೋಲ್ ಮಾಡಿದೆ. ಡ್ರಗ್ಸ್ ಮಾಫಿಯಾದ ನೆರಳಿನಲ್ಲೇ ಕಾಂಗ್ರೆಸ್ ಸರ್ಕಾರ ಬದುಕಿತ್ತು. ಡ್ರಗ್ಸ್ ಮಾಫಿಯಾದ ದಂಧೆಯಿಂದಲೇ ಕಾಂಗ್ರೆಸ್ ಸರ್ಕಾರ ಉಳಿದುಕೊಂಡಿತ್ತು. ಅಂತಹ ಡ್ರಗ್ಸ್ ದಂಧೆ ಇದೀಗ ಕಂಟ್ರೋಲ್ ಆಗಿದೆ. ಪಿಎಸ್‍ಐ ಕೇಸ್‍ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನೇ ಜೈಲಿಗೆ ಹಾಕುವ ಧೈರ್ಯ ಸಿಎಂ ಬೊಮ್ಮಾಯಿ ತೋರಿಸಿದ್ದಾರೆ. ನಮ್ಮ ಸರ್ಕಾರ ಭ್ರಷ್ಟಾಚಾರ ಸಹಿಸಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ನೀವು NRI?- ಪ್ರಶ್ನೆಗೆ ನಾನು HRI ಎಂದ ಆನಂದ್ ಮಹೀಂದ್ರಾಗೆ ಭಾರತೀಯರ ಚಪ್ಪಾಳೆ
Advertisement
ಪಿಎಸ್‍ಐ ಅಕ್ರಮ ನೇಮಕಾತಿ ತನಿಖೆಯ ಹಗ್ಗ ಕಾಂಗ್ರೆಸ್ ಕುತ್ತಿಗೆಯನ್ನೇ ಸುತ್ತಿಕೊಳ್ಳುತ್ತದೆ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿ. ಪಿಎಸ್‍ಐ ಹಗರಣದ ತನಿಖೆ ಪೂರ್ತಿಯಾದಾಗ ಕಾಂಗ್ರೆಸ್‍ನ ಯಾರ‍್ಯಾರು ಇದ್ದಾರೆ ಎಂದು ಗೊತ್ತಾಗುತ್ತೆ. ಆ ನಂತರ ಎಲ್ಲಾ ಹಗರಣಗಳು ಹೊರಗೆ ಬರುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.