– ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ
ಮಂಗಳೂರು: ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೂವಿನ ಬೆಳೆಗೆ ಎಕರೆಗೆ 50 ಲಕ್ಷ ಎಲ್ಲಿ ಖರ್ಚು ಮಾಡಲಾಗುತ್ತೆ ಎಂಬ ಬಗ್ಗೆ ಸಿದ್ದರಾಮಯ್ಯ ಅಧ್ಯಯನ ಮಾಡಲಿ, ಸಿದ್ದರಾಮಯ್ಯನವರು ಯೋಚನೆ ಮಾಡಿ ಮಾತಾಡೋದು ಒಳ್ಳೆಯದು. ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆದ ರೀತಿಯಲ್ಲಿ, ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
Advertisement
ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. @CMofKarnataka ಅವರು, ಎಕರೆಗೆ ರೂ.25,000 ಪರಿಹಾರ ಘೋಷಿಸಿರುವುದು ಅನ್ಯಾಯ.
ಅವರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು.
3/7
— Siddaramaiah (@siddaramaiah) May 6, 2020
Advertisement
ಓರ್ವ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಸಿದ್ದರಾಮಯ್ಯರ ಈ ರೀತಿಯ ಟೀಕೆ ಸರಿಯಲ್ಲ. ಹೂವಿನ ಬೆಳೆಗೆ ಎಕರೆಗೆ ರೈತ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯರಿಗೆ ಇಲ್ಲ. ಎಕರೆಗೆ 50 ಲಕ್ಷ ಖರ್ಚು ಮಾಡುತ್ತಾನೆ ಎಂಬ ಹೇಳಿಕೆ ಇದನ್ನು ನಿರೂಪಿಸುತ್ತದೆ ಎಂದು ಕಿಡಿಕಾರಿದರು.
Advertisement
ಸಂಕಷ್ಟದ ಈ ಸಂದರ್ಭ ರಾಜಕೀಯ ಮಾಡುವ ಹೇಯ ಕೃತ್ಯ ಸಿದ್ದರಾಮಯ್ಯ ನಡೆಸಿದ್ದಾರೆ. ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.
Advertisement
ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗಿಸಿದೆ. ಸಿದ್ದರಾಮಯ್ಯರಂತ ಹಿರಿಯರು ಈ ರೀತಿ ಟೀಕೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಸರ್ಕಾರದ ಸಂದರ್ಭ ರೈತರ ಆತ್ಮಹತ್ಯೆ ಆಯ್ತು. ಆಗ ಯಾಕೆ ರೈತರಿಗೆ, ಕೃಷಿಕರಿಗೆ ಯೋಜನೆ ಘೋಷಣೆ ಮಾಡಿಲ್ಲ ಎಂದು ಇದೇ ವೇಳೆ ಮಾಜಿ ಸಿಎಂರನ್ನು ಪ್ರಶ್ನಿಸಿದರು.
ಯಡಿಯೂರಪ್ಪನವರು ಕೊಟ್ಟಿರುವ ಯೋಜನೆ ಅಭೂತಪೂರ್ವವಾದುದು. ರಾಜ್ಯದ ಇತಿಹಾಸದಲ್ಲಿ ಇಂತಹ ಸಂದರ್ಭ ಕೊಟ್ಟಿರುವ ಯೋಜನೆ ಬಹಳ ದೊಡ್ಡದು. ಅದನ್ನು ಸ್ವಾಗತ ಮಾಡಲು ಮನಸ್ಸು ಇಲ್ಲದ ನೀವು ಕ್ಷುಲ್ಲಕ ರಾಜಕಾರಣ ಮಾಡ್ತಿದ್ದೀರಿ. ಸಾಮಾಜಿಕ ನ್ಯಾಯದಡಿ ಪ್ಯಾಕೇಜ್ ಘೋಷಿಸಲಾಗಿದೆ ಎಂದು ವಿವರಿಸಿದರು.