ಮಂಡ್ಯ: ಜೆಡಿಎಸ್ (JDS) ಭದ್ರಕೋಟೆ ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ನೇತೃತ್ವದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆ (Sankalpa Yatra) ಮೂಲಕ ಚುನಾವಣಾ ರಣಕಹಳೆ ಊದಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಪದಾಧಿಕಾರಿಗಳು, ಸದಸ್ಯರೊಂದಿಗೆ ಇನ್ ಡೋರ್ ಸಭೆ ನಡೆಸಿದ ಕಟೀಲ್, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಬೂತ್‍ನಲ್ಲಿ ಬಿಜೆಪಿ ಪರವಾಗಿ ಅಲೆ ಬೀಸುವಂತೆ ಪಕ್ಷ ಸಂಘಟಿಸಿ ಎಂದು ಕರೆಕೊಟ್ಟರು. ನಂತರ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಇದನ್ನೂ ಓದಿ: Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್
ಬಳಿಕ ಬಹಿರಂಗ ಸಭೆ ಕುರಿತು ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜೆಡಿಎಸ್ ಮುಕ್ತ ಮಂಡ್ಯ ಮಾಡಲು ಕಾರ್ಯಕರ್ತರಿಗೆ ಕರೆಕೊಟ್ರು. ಸಂಕಲ್ಪ ಯಾತ್ರೆಯನ್ನು ಬಾಗಲಕೋಟೆಯಿಂದ ಪ್ರಾರಂಭ ಮಾಡಿದ್ದೇನೆ. ಇಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಿಮಿಷಾಂಭ ದೇವಿ ದರ್ಶನ ಪಡೆದು ಜಿಲ್ಲೆಯ 7 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಅಲ್ಲದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮಂಡ್ಯವನ್ನು ಜೆಡಿಎಸ್ ಮುಕ್ತ ಮಾಡ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ಶಿವಸೇನೆ ಮುಖಂಡ ಗುಂಡಿನ ದಾಳಿಗೆ ಬಲಿ
ಬಿಜೆಪಿಗೆ ನೆಲೆಯಿಲ್ಲದ, ಬಿಜೆಪಿಗೆ ಸೆಲೆಯಿರುವ ಮಂಡ್ಯದಲ್ಲಿ ಸಾವಿರಾರು ಕಾರ್ಯಕರ್ತರನ್ನು ನೋಡಿ ಖುಷಿಯಾಯ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೀರಿ. ಮುಂದಿನ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ ಜೆಡಿಎಸ್ ಮುಕ್ತ ಮಾಡುವಂತೆ ಕಾರ್ಯಕರ್ತರಿಗೆ ಕರೆಕೊಟ್ರು. ಹೆಚ್.ಡಿ.ಕುಮಾರಸ್ವಾಮಿ (HDKumaraswamy) ಮುಖ್ಯಮಂತ್ರಿಯಾದಾಗ ಆಡಳಿತವನ್ನು ವಿಧಾನಸೌಧ ಬಿಟ್ಟು ತಾಜ್ ಹೋಟೆಲ್‌ನಲ್ಲಿ ಮಾಡಿದ್ರು. ಕೆಲಸ ಮಾಡದೇ ಕಣ್ಣೀರು ಹಾಕಿದ್ರು. ಮುಂದಿನ ಬಾರಿ ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡ್ತೀರಿ. ಶ್ರೀರಂಗಪಟ್ಟಣದಲ್ಲಿ ಸಭೆ ಮುಗಿದ ಬಳಿಕ ಮಂಡ್ಯ ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿಯು ಸಹ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಸಂಕಲ್ಪ ಸಭೆ ನಡೆಯಿತು.