ಬಾಗಲಕೋಟೆ: ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಒಬ್ಬ ವಿದೂಷಕ, ಪಾಪ ಅವರಿಗಿನ್ನೂ ಮೆಚ್ಯೂರಿಟಿ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕುಟುಕಿದ್ದಾರೆ.
`ಆರ್ಕಾವತಿ ವಿಚಾರ, ಲೋಕಾಯುಕ್ತ ಬಂದ್ ಮಾಡದಿದ್ದರೇ ಸಿದ್ದರಾಮಯ್ಯ (Siddaramaiah) ಜೈಲಿಗೆ ಹೋಗ್ತಿದ್ರು’ ಎಂಬ ಕಟೀಲ್ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಟೀಲು ಒಬ್ಬ ವಿದೂಷಕ, ಪಾಪ ಅವರಿಗೆ ಮೆಚ್ಯೂರಿಟಿ ಇಲ್ಲ. ನಮ್ಮ ಸರ್ಕಾರ ಹೋಗಿ ಎಷ್ಟು ದಿನ ಆಯ್ತು? ಈಗ ಯಾವ ಸರ್ಕಾರ ಇದೆ? ಮೂರು ವರ್ಷದಿಂದ ಯಾರು ಅಧಿಕಾರದಲ್ಲಿದ್ದಾರೆ? ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದವರು ಯಾರು? ಎಂಬುದಿನ್ನೂ ಗೊತ್ತಿಲ್ಲವೆನ್ನುವಂತೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್
Advertisement
Advertisement
ಬಿಜೆಪಿ (BJP) ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಇವೆಲ್ಲಾ ರೈಜ್ ಮಾಡಲಿಲ್ಲ? ಆಗ ಬಾಯಿಗೇನು ಕಡುಬು ಸಿಕ್ಕಿಸಿಕೊಂಡಿದ್ರಾ? ನಾವು ಭ್ರಷ್ಟಾಚಾರ ಆರೋಪ ಮಾಡೋಕೆ ಶುರು ಮಾಡಿದ ಮೇಲೆ ಹೀಗೆಲ್ಲಾ ಮಾತಾಡ್ತಿದಾರೆ. ನಾನು ಅದಕ್ಕೆ ಹೇಳಿದ್ದೆ, 2006 ರಿಂದ ಇವತ್ತಿನವರೆಗೆ ಯಡಿಯೂರಪ್ಪ (Yadiyurappa, ಕುಮಾರಸ್ವಾಮಿ (HD Kumaraswamy) ಆಡಳಿತ ಇತ್ತು. ಇವಾಗ ಅಧಿಕಾರ ಮಾಡ್ತಾ ಇದ್ದಾರೆ. ನಾವು 5 ವರ್ಷ ಆಡಳಿತದಲ್ಲಿದ್ವಿ. 2006 ರಿಂದ ಎಲ್ಲವನ್ನೂ ಬೇಕಿದ್ರೆ ತನಿಖೆ ಮಾಡಿಸಿ, ಅಧಿಕಾರದಲ್ಲಿ ನೀವೆ ಇರುವಾಗ ನಿಮಗೇಕೆ ಭಯ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
40 ಪರ್ಸೆಂಟ್ ಸರ್ಕಾರ ಅಂತ ಸುಮ್ಮನೆ ಆರೋಪ ಮಾಡ್ತಾ ಇಲ್ಲ. ನರೇಂದ್ರ ಮೋದಿ (Narendra Modi) ಬಂದು ನನಗೆ 10 ಪರ್ಸೆಂಟ್ ಸರ್ಕಾರ ಅಂದ್ರಲ್ಲ. ಆಗ ಯಾವ ದಾಖಲಾತಿ ಕೊಟ್ಟಿದ್ದೀರಪ್ಪಾ? 2018ರಲ್ಲಿ ನನ್ನ ವಿರುದ್ಧ ಆರೋಪ ಮಾಡಿದಾಗ ಯಾವ ದಾಖಲಾತಿ ಕೊಟ್ಟಿದ್ದರು? ಆವಾಗ ಕಟೀಲು ಎಲ್ಲಿದ್ದರು? ಯಡಿಯೂರಪ್ಪ ಅಧ್ಯಕ್ಷರಾಗಿದ್ದರು ಅಲ್ವಾ? ನರೇಂದ್ರ ಮೋದಿ ಕಡೆಯಿಂದ ಅವರೇ ಹೇಳಿಸಿದ್ದು ಅಲ್ವಾ? ಎಂದು ಸರಣಿ ಪ್ರಶ್ನೆಗಳನ್ನ ಮುಂದಿಟ್ಟರು. ಇದನ್ನೂ ಓದಿ: PFI ಮೇಲೆ ದಾಳಿ – ಸಿದ್ದು ಸರ್ಕಾರದಿಂದ ಕೇಸ್ ವಾಪಸ್, ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ
ಜಾತಿಗೂ ಭ್ರಷ್ಟಾಚಾರಕ್ಕೂ ಸಂಬಂಧವೇನು?
40 ಪರ್ಸೆಂಟ್ ಕಮೀಷನ್ (40 Percent Commission) ಸರ್ಕಾರ (Government) ಎಂಬ ಆರೋಪಕ್ಕೆ, ವಿರುದ್ಧವಾಗಿ ಬಿಜೆಪಿ (BJP) ನಾಯಕರು ಜಾತಿ ಅಸ್ತ್ರ ಎಳೆತಂದಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಸಂಬಂಧವೇನು? `ಬಸವರಾಜ ಬೊಮ್ಮಾಯಿ (Basavaraj Bommai) ಇಸ್ ದಿ ಹೆಡ್ ಆಫ್ ದಿ ಗವರ್ನಮೆಂಟ್’. ಅವರ ಮೇಲೆ ಆರೋಪ ಮಾಡ್ತಿದ್ದೇವೆಯೇ ಹೊರತು ಜಾತಿಯ ಮೇಲಲ್ಲ. ಈ ರೀತಿ ಕ್ಷುಲ್ಲಕ ವಿಚಾರಗಳಿಂದ ದಾರಿ ತಪ್ಪಿಸುವ ಕೆಲಸ ಮಾಡಿದ್ರೆ ನಂಬೋದಕ್ಕೆ ಜನ ತಯಾರಿಲ್ಲ. ಏಕೆಂದರೆ ಜನರೂ ಈಗ ಬುದ್ಧಿವಂತರಾಗಿದ್ದಾರೆ.
ಬಿಜೆಪಿಗೆ ನನ್ನ ಕಂಡ್ರೆ ಭಯ:
`ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್, ನೋ ಸ್ಟ್ರಾಂಗ್ ನೋ ಎನಿಮಿಸ್’ ಅಂತಾ ಅಸೆಂಬ್ಲಿಯಲ್ಲಿ ಹೇಳಿದ್ದೆ. ಅದಕ್ಕೆ ಅವರು ನನ್ಮೇಲೆ ಟಾರ್ಗೆಟ್ ಮಾಡೋದು. ದೊಡ್ಡಬಳ್ಳಾಪುರ ಸಮಾವೇಶದಲ್ಲಿ ನೋಡಿದ್ರಲ್ಲಾ ಯಾರ ಮೇಲೆ ಮಾತಾಡಿದ್ರು? ಅಂದ್ರೆ ನನ್ನ ಕಂಡ್ರೆ ಬಿಜೆಪಿಗೆ ಭಯ. ಆ ಭಯದಿಂದ ಹಿಂಗೆಲ್ಲಾ ಮಾತಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.