ಬೆಂಗಳೂರು: ಬಿಜೆಪಿ ಸಂಕಲ್ಪ ಯಾತ್ರೆ (BJP Sankalpa Yatra) ಯಿಂದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರ ಉಳಿದಿದ್ದಾರೆ.
Advertisement
ಈ ಸಂಬಂಧ ಟ್ವಿಟ್ ಮಾಡಿರುವ ಕಟೀಲ್ (Nalin Kumar Kateel), 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ ಮೂರನೇ ವಾರದಿಂದ ರಾಜ್ಯದಲ್ಲಿ ಅಸಲಿ ರಾಜಕೀಯದಾಟ
Advertisement
ಸಂಕಲ್ಪ ಯಾತ್ರೆಯ ರಾಜ್ಯ ಪ್ರವಾಸ ಸಹಿತ ಪಕ್ಷದ ವಿವಿಧ ಚಟುವಟಿಕೆಗಳು ಮುಖಂಡರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.
ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಆದಷ್ಟು ಶೀಘ್ರದಲ್ಲಿ ಮತ್ತೇ ಪಕ್ಷ, ಕ್ಷೇತ್ರದ ಸೇವೆಗೆ ಮರಳುತ್ತೇನೆ.
— Nalinkumar Kateel (@nalinkateel) November 5, 2022
Advertisement
ಟ್ವೀಟ್‍ನಲ್ಲೇನಿದೆ..?: ಸಂಕಲ್ಪ ಯಾತ್ರೆಯ ರಾಜ್ಯ ಪ್ರವಾಸ ಸಹಿತ ಪಕ್ಷದ ವಿವಿಧ ಚಟುವಟಿಕೆಗಳು ಮುಖಂಡರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಮತ್ತೇ ಪಕ್ಷ, ಕ್ಷೇತ್ರದ ಸೇವೆಗೆ ಮರಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
Advertisement
ಈ ಹಿಂದೆ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರಿನಲ್ಲಿ ಶುಕ್ರವಾರ ಜನಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ 15 ಸಾವಿರ ಗುರಿ ಇದ್ದರೆ, 25 ರಿಂದ 30 ಸಾವಿರ ಜನರು ಭಾಗವಹಿಸುತ್ತಿದ್ದಾರೆ. ನಮ್ಮ ಸಭೆಯಲ್ಲಿ 5 ಸಾವಿರ ಜನರ ನಿರೀಕ್ಷೆ ಇದ್ದರೆ 8 ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.