ಮಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ 80 ಪರ್ಸೆಂಟ್ ಸರ್ಕಾರವಾಗಿದೆ. ಇದು ಕಳ್ಳರ, ಭ್ರಷ್ಟಚಾರಿಗಳ ಸರ್ಕಾರ ಎಂದು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ವಾ (Nalin Kumar Kateel) ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಸಂವಿಧಾನದ ಹೆಸರಲ್ಲಿ ಮಾತನಾಡುವ ಸಿಎಂ ನೈತಿಕತೆಯಿಂದ ರಾಜೀನಾಮೆ ನೀಡಬೇಕು. ತನಿಖೆಗೆ ಆದೇಶ ಆಗಿದೆ. ರಾಜ್ಯಪಾಲರ ಆದೇಶವನ್ನೇ ಪ್ರಶ್ನೆ ಮಾಡಿದ್ರೆ ಆತ್ಮವೇ ಇಲ್ಲ ಎನ್ನುವಂತೆ. ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂತು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿಎಂ ಏನ್ ದೆವ್ವನಾ ನಾನು ಹೆದರೋಕೆ – ಸಿದ್ದರಾಮಯ್ಯಗೆ ಹೆಚ್‌ಡಿಕೆ ತಿರುಗೇಟು
ಸಿದ್ದರಾಮಯ್ಯ ಮೊದಲಿಗೆ ರಾಜೀನಾಮೆ ಕೊಟ್ಟು ತನಿಖೆಗೆ ಆದೇಶ ಮಾಡಬೇಕಿತ್ತು. ಆಗ ಅವರ ಆದರ್ಶಗಳ ಮೇಲೆ ಇನ್ನಷ್ಟು ಗೌರವ ಹೆಚ್ಚಾಗುತ್ತಿತ್ತು ಎಂದು ಟಾಂಗ್ ಕೊಟ್ಟರು.
ಚುನಾವಣಾ ಬಾಂಡ್ ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ನಮ್ಮೆಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇಸ್ ಹಾಕಿದವರು ಯಾರೋ ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿ. ಸದ್ಯ ಎಫ್‌ಐಆರ್‌ಗೆ ತಡೆಯಾಜ್ಞೆ ಸಿಕ್ಕಿದೆ. ಚುನಾವಣಾ ಬಾಂಡ್ ಸರಿಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಕೇಸ್ ಹಾಗಲ್ಲ. ಮುಡಾ ಹಾಗೂ ವಾಲ್ಮೀಕಿ ಹಗರಣ ಸೇರಿ ಎರಡರಲ್ಲೂ ಸಿಕ್ಕಿ ಬಿದ್ದಿದ್ದಾರೆ ಎಂದು ಎಂದು ಹೇಳಿದರು. ಇದನ್ನೂ ಓದಿ: ಮುಡಾಸ್ತ್ರಕ್ಕೆ ಜಾತಿ ಜನಗಣತಿ ಪ್ರತ್ಯಾಸ್ತ್ರ ಬಿಟ್ಟ ಸಿಎಂ – ಕಾಂಗ್ರೆಸ್‌ನಲ್ಲಿ ಮತ್ತೆ ಪರ-ವಿರೋಧಕ್ಕೆ ವೇದಿಕೆ ಸಜ್ಜು