ಬೆಂಗಳೂರು: ಮಹಿಳೆಯೊಬ್ಬರು ಬ್ಲಾಕ್ ಮೇಲೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವರಣೆ ಕೇಳಿದ್ದಾರೆ.
ಮಹಿಳೆ ಬ್ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡಿ. ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಪ್ರಸಾರ ಆಗುತ್ತಿರುವ ಆರೋಪ ಬಗ್ಗೆ ಮಾಹಿತಿ ನೀಡುವಂತೆ ಕಟೀಲ್ ಅವರು ಶಾಸಕರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್
ಮಹಿಳೆಯೊಬ್ಬರಿಂದ ನಿರಂತರವಾಗಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ ಎಂದು ಶಾಸಕರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ದೂರು ನೀಡುತ್ತಿದ್ದಂತೆಯೇ ಮಹಿಳೆ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಶಾಸಕರಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕ್ಕಾಗಿ ಕಳೆದೆರಡು ವರ್ಷಗಳಿಂದ ಹೋರಾಡುತ್ತಿದ್ದೇನೆ ಎಂದು ಮಹಿಳೆ ವಕೀಲ ಜಗದೀಶ್ ಮೂಲಕ ಠಾಣೆಗೆ ತೆರಳಿದ್ದಾರೆ. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ