ದಾವಣಗೆರೆ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವವರ ಹೆಸರು ಸರಿಯಲ್ಲ ಎಂದು ರೈಲಿಗೆ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರು ನಾಮಕರಣ ಮಾಡಿರುವ ವಿಚಾರವನ್ನು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಸಮರ್ಥಿಸಿಕೊಂಡರು.
ದಾವಣಗೆರೆಯಲ್ಲಿ (Davanagere) ಮಾತನಾಡಿದ ಅವರು, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ. ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಅವರಾಗಿದ್ದಾರೆ. ಈಗ ಮೋದಿಯವರು (Narendra Modi) ಏನ್ ಮಾಡಿದ್ದಾರೋ ಅದನ್ನು ಒಡೆಯರ್ ಅವರು ಆಗಿನ ಕಾಲದಲ್ಲಿ ಮಾಡಿದ್ದಾರೆ. ಅಲ್ಲದೆ ಟಿಪ್ಪು ಹೆಸರೇ ಗೊಂದಲದಲ್ಲಿದೆ. ಅವನ ಸಾಧನೆಗಳು ಚರ್ಚೆಯಲ್ಲಿವೆ, ಹಾಗಾಗಿ ಚರ್ಚೆಯಲ್ಲಿ ಇರುವರ ಹೆಸರು ಟ್ರೈನ್‌ಗೆ ಇಡುವುದು ಸರಿಯಲ್ಲ. ಆದ್ದರಿಂದ ಒಡೆಯರ್ ಎಕ್ಸ್‌ಪ್ರೆಸ್ (Wodeyar Express) ಎಂದು ಮರುನಾಮಕರಣ ಮಾಡಿದ್ದೇವೆ ಎಂದು ಹೇಳಿದರು.
Advertisement
Advertisement
ಎಸ್ಸಿ, ಎಸ್‌ಟಿ (SC, ST) ಮೀಸಲಾತಿ ಬೇಡಿಕೆ ಈಡೇರಿಕೆ ಮಾಡಿದ್ದೇವೆ. ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಜನರ ಜನತೆಗೆ ಬೆಂಬಲವಾಗಿ ನಿಲ್ಲುವ ಪಾರ್ಟಿಯಾಗಿ ನಾವು ಗುರುತಿಸಿಕೊಂಡಿದ್ದೇವೆ. ಎರಡು ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಎಲ್ಲಾ ಕಾನೂನು ವಿವರಗಳನ್ನು ಪಡೆದು ಮಾಡಿದ್ದಾರೆ. ಸಾಂವಿಧಾನಿಕವಾಗಿ ತಯಾರಿ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
Advertisement
ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಎಸ್ ಈಶ್ವರಪ್ಪಗೆ ಅಸಮಾಧಾನ ಇಲ್ಲ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬಿಸಲು ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಸಂಪುಟ ವಿಸ್ತಾರಣೆಗೆ ಸಲಹೆ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ಪುನಃ ಸಚಿವ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.
Advertisement
ಭಾರತ್ ಜೋಡೋ ಹಾಗೂ ಎಸ್ಸಿ ಎಸ್ಟಿ ಮೀಸಲಾತಿಗೆ ಸಂಬಂಧ ಇಲ್ಲ: ಕಾಂಗ್ರೆಸ್ ಸರ್ಕಾರ ಇದ್ದಾಗ ಅವರ ನಾಯಕರು ಕಣ್ಮುಚ್ಚಿ ಕುಳಿತ್ತಿದ್ದರು. ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೇ, ಅವರ ಕಾಲಘಟ್ಟದಲ್ಲಿ ಮಾಡಬಹುದಿತ್ತು. ಅವರು ಕಮಿಟಿ ಮಾಡಿ ಕಮಿಟಿಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡಿದರು. ನಮ್ಮ ಸರ್ಕಾರ ಯಾರ ಮಾತು ತಪ್ಪದ ಸರ್ಕಾರ ನುಡಿದಂತೆ ನಡೆದಿದೆ.
ಭಾರತ್ ಜೋಡೋ ಭಾರತದಿಂದ ಓಡುವಂತಹ ಯಾತ್ರೆಯಾಗಿದೆ. ಗಾಂಧಿಗೂ ಈಗಿರುವ ಗಾಂಧಿ ಕುಟುಂಬಕ್ಕೂ ಏನ್ ಸಂಬಂಧ ಎಂದು ಮಕ್ಕಳು ಕೂಡ ಈಗ ಕೇಳ್ತಾ ಇದ್ದಾರೆ. ಭಾರತ ವಿಭಜನೆಗೆ, ಎಲ್ಲಾ ಗೊಂದಲಕ್ಕೂ ಕಾಂಗ್ರೆಸ್ ಕಾರಣ, ಧರ್ಮದ ಹಾಗೂ ಜಾತಿಗಳ ನಡುವಿನ ಸಂಘರ್ಷಕ್ಕೆ ಕಾಂಗ್ರೆಸ್‌ನ ತೀರ್ಮಾನವೇ ಕಾರಣ ಎಂದು ಕಿಡಿಕಾರಿದರು.
ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ: ಮುಸ್ಲಿಂ ಸಮುದಾಯದಲ್ಲಿ ಜಯಂತಿ ಆಚರಣೆ ಪದ್ಧತಿಯಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದಾಗ ಟಿಪ್ಪು ಜಯಂತಿ ತಂದು ದುರಂತಕ್ಕೆ ಕಾರಣರಾದರು. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದು ಅವರ ಭಾವನೆಗಳನ್ನು ಕೆರಳಿಸಿದರು, ಮತಬ್ಯಾಂಕ್‌ಗಾಗಿ ಸಣ್ಣತನದ ರಾಜಕಾರಣ ಮಾಡಿದರು. ಭಾರತವನ್ನು ಜಾತಿ, ಮತ, ಪಂಥ, ಪಂಗಡಗಳಲ್ಲಿ ಎಲ್ಲಿ ತುಂಡು ಮಾಡಬೇಕೋ ಅಲ್ಲಿ ಮಾಡಬೇಕೋ ಮಾಡಿದ್ದಾರೆ, ವಿಭಜನೆ ಮಾಡಿರುವವರು ಎಲ್ಲಿ ಜೋಡೋ ಮಾಡ್ತಾರೆ ಎಂದು ಟಾಂಗ್ ನೀಡಿದರು.
ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರು, ಪಾಕಿಸ್ತಾನದ ಪರ ಮಾತನಾಡಿದರನ್ನು ಜೋಡಿಸಿಕೊಂಡು ಹೋಗ್ತಾರೆ. ಈ ದೇಶವನ್ನು ಜೋಡಿಸಿದವರು ಯಾರಾದರೂ ಇದ್ದರೆ ಅದು ಅಟಲ್ ಬಿಹಾರಿ ವಾಜಪೇಯಿ ಅವರಾಗಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪತ ರಸ್ತೆ ಮಾಡಿ ಜೋಡಿಸಿದ್ದಾರೆ ಎಂದ ಅವರು ಅಕ್ಟೋಬರ್ 11 ರಿಂದ ಸಿಎಂ ನೇತೃತ್ವದಲ್ಲಿ ಕರ್ನಾಟಕ ಯಾತ್ರೆ ಶುರುವಾಗುತ್ತದೆ ಎಂದರು. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ
ಅರ್ಕಾವತಿ ಬಡಾವಣೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅರ್ಕಾವತಿ ಹಗರಣವನ್ನು ಮುಚ್ಚಿಡುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ದಾರೆ, ದಾಖಲೆಗಳನ್ನು ಮುಚ್ಚಿಟ್ಟಿದ್ದಾರೆ, ನಮ್ಮ ಸರ್ಕಾರ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತೇವೆ, ಫಲಿತಾಂಶಕ್ಕಾಗಿ ಕಾದು ನೋಡಿ ಎಂದ ತಿಳಿಸಿದರು. ಇದನ್ನೂ ಓದಿ: 2023 ಚುನಾವಣೆ – ಮತ್ತೆ ಟಿಪ್ಪು ವಾರ್ ಶುರು ಆಗುತ್ತಾ?