BelgaumDistrictsKarnatakaLatestMain Post

ಸಿದ್ದರಾಮೋತ್ಸವಕ್ಕೆ ದುಡ್ಡನ್ನು ಸಿದ್ದರಾಮಯ್ಯ ಅವರ ಅಪ್ಪನ ಮನೆಯಿಂದ ತಂದ್ರಾ: ಕಟೀಲ್ ಪ್ರಶ್ನೆ

ಚಿಕ್ಕೋಡಿ (ಬೆಳಗಾವಿ): ಸಿದ್ದರಾಮೋತ್ಸವ (Siddaramotsava) ಹುಟ್ಟುಹಬ್ಬದ ಪ್ರಯುಕ್ತ 75 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟೊಂದು ಹಣ ಸಿದ್ದರಾಮಣ್ಣ ಅವರಿಗೆ ಎಲ್ಲಿಂದ ಬಂತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ವಾಗ್ದಾಳಿ ನಡೆಸಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಶಾಸಕ ಶ್ರೀಮಂತ್ ಪಾಟೀಲ್ (Srimanth Patil), ಮಾಲೀಕತ್ವದ ಅಥಣಿ ಶುಗರ್ ಕಾರ್ಖಾನೆಯಲ್ಲಿ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಗುಂಡು ತುಂಡು ಕೊಟ್ಟು ಜನರನ್ನ ತರಿಸಿದ್ದೀರಿ ಎಂಂದು ಕಿಡಿಕಾರಿದರು. ಇದನ್ನೂ ಓದಿ: ಸಾವಿರಾರು ಪಿಎಫ್‌ಐ ಉಗ್ರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಕ್ಷಮಾದಾನ: ಸುನಿಲ್ ಕುಮಾರ್

ಸಿದ್ದರಾಮಯ್ಯ ಗುಂಡು ತುಂಡು ತಂದು ಕೊಟ್ಟಿದ್ದಾರೆ. ಅವರ ಅಪ್ಪನ ಮನೆಯಿಂದ ದುಡ್ಡು ಬಂತಾ? ಸಿದ್ದರಾಮಯ್ಯ (Siddaramaiah) ಅವರ ಇತಿಹಾಸ ನೋಡಿ, ಶ್ರೀಮಂತ ಕುಟುಂಬದಿಂದ ಬಂದಿಲ್ಲಾ. ಆದರೂ ಅಷ್ಟೊಂದು ಹಣ ಖರ್ಚು ಮಾಡಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಾಡಿದೆ ಅಂತ ಹೇಳುತ್ತಾರೆ.ಯಾವ ದಾಖಲೆ ಇದ್ದರೆ ಸಿದ್ದರಾಮಯ್ಯ ಬಿಡುಗಡೆ ಮಾಡಲಿ ಎಂದು ಕಟೀಲ್ ಸವಾಲು ಹಾಕಿದರು.

ಕೊರೋನಾ (Corona Virus) ಲಸಿಕೆ ಯಲ್ಲಿ ದೇಶ ಕ್ರಾಂತಿ ಮಾಡಿದೆ. ಆದರೆ ಕಾಂಗ್ರೆಸ್ ಕೊರೊನಾ ಲಸಿಕೆಯಲ್ಲಿ ರಾಜಕೀಯ ಮಾಡುತ್ತದೆ.ಸಿದ್ದರಾಮಣ್ಣ ಲಸಿಕೆ ಪಡಿಯಬೇಡಿ ಮಕ್ಕಳಾಗಲ್ಲ ಅಂತ ಹೇಳಿದ್ರು. ಆದರೆ ಅವರೇ ಲಸಿಕೆ (Vaccine) ಪಡೆದರು. ರಾತ್ರಿ ಹೊತ್ತಿನಲ್ಲಿ ರಾಹುಲ್ ಗಾಂಧಿ (Rahul Gandhi) ಪಡೆದಿದ್ದಾರೆ ಎಂದು ಕೈ ನಾಯಕರ ವಿರುದ್ಧ ಕಟೀಲ್ ಹರಿಹಾಯ್ದರು.

Live Tv

Leave a Reply

Your email address will not be published. Required fields are marked *

Back to top button