ಹಾವೇರಿ: ಬಿಜೆಪಿಯಲ್ಲಿ ಹೆಂಡತಿ ಹೆಸರಲ್ಲಿ ರಾಜಕಾರಣ ಮಾಡಲ್ಲ, ಅಜ್ಜನ ಹೆಸರಲ್ಲಿ ಎಂಪಿ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವ್ಯಂಗ್ಯವಾಡಿದರು.
ಹಾವೇರಿ (Haveri) ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಪರಿವಾರ, ಕುಟುಂಬದಿಂದ ಬಂದವ ಪ್ರಧಾನಿ ಆಗಿಲ್ಲ. ಸಾಮಾನ್ಯ ಕುಟುಂಬದಿಂದ ಬಂದವರು ಪ್ರಧಾನಿ ಆಗಿದ್ದಾರೆ. ಕೆಲ ಪಕ್ಷಗಳಲ್ಲಿ ಕುಟುಂಬದ ಅಡುಗೆ ಮನೆಯಲ್ಲಿ ಕೆಲಸ ಮಾಡಿದವ ಶಾಸಕ ಆಗಬಲ್ಲ. ಅಡುಗೆ ಮನೆಗೆ ಸಾಮಗ್ರಿ ತಂದವ ಶಾಸಕ ಆಗುವ ಪಕ್ಷ ಇವೆ ಎಂದು ಟೀಕಿಸಿದರು.
Advertisement
Advertisement
ಕೊರೊನಾ (Corona) ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ, ಮೊದಲ ಲಸಿಕೆ ಸೋನಿಯಾ ಗಾಂಧಿಗೆ, ಎರಡನೇ ಲಸಿಕೆ ರಾಹುಲ್ ಗಾಂಧಿ (Rahul Gandhi), ಮೂರನೇ ಲಸಿಕೆ ಪ್ರಿಯಾಂಕಾ ಗಾಂಧಿಗೆ ನಾಲ್ಕನೇ ಲಸಿಕೆ ವಾದ್ರಾಗೆ ಕೊಡುತ್ತಿದ್ದರು. ಆದರೆ ನರೇಂದ್ರ ಮೋದಿ (Narendra Modi) ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟರೆಂದು ಲೇವಡಿ ಮಾಡಿದರು.
Advertisement
ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ (Sumalatha Ambareesh) ಸ್ಪರ್ಧಿಸಿ ಗೆಲುವನ್ನು ಸಾಧಿಸಿದವರಾಗಿದ್ದಾರೆ. ಯಾವ ಪಕ್ಷಕ್ಕೆ ಹೋಗಬೇಕು ಎನ್ನುವುದನ್ನು ಅವರು ಆಯ್ಕೆ ಮಾಡುತ್ತಾರೆ. ಅದು ಅವರಿಗೆ ಬಿಟ್ಟ ವಿಷಯವಾಗಿದೆ. ಈ ಬಗ್ಗೆ ಚರ್ಚೆಗಳೂ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿವೆ. ಜೊತೆಗೆ ಸುಮಲತಾ ಅಂಬರೀಶ್ ಅವರು ಮಂಡ್ಯದ ಸಂಸದೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
Advertisement
ವಿರೂಪಾಕ್ಷಪ್ಪ ವಿಚಾರವಾಗಿ ಈಗಾಗಲೇ ಲೋಕಾಯುಕ್ತರು ವರದಿ ಕೇಳುತ್ತಿದ್ದೇವೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಐದಾರು ಜನರಿಗೆ ಟಿಕೆಟ್ ಕೈತಪ್ಪುವ ಹೇಳಿಕೆಗೆ ಅದರ ಬಗ್ಗೆ ನಮ್ಮ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ ಎಂದರು. ಇದನ್ನೂ ಓದಿ: ಮಾಡಾಳ್ ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ; ಆರೋಪಿಗಳ ಪರ ಜೈಕಾರ ಹಾಕೋದು ಡಿಕೆಶಿ ಸಂಸ್ಕೃತಿ – ಸಿ.ಟಿ ರವಿ
ಅಹಿಂದ ಚಳುವಳಿ ಮೂಲಕ ಮಾಜಿ ಸಿಎಂ ಒಬ್ರು ನಾಯಕ ಆದರು. ಅಹಿಂದ ಹೆಸರಲ್ಲಿ ಸಿಎಂ ಆದವರು ತಮ್ಮ ಸಮುದಾಯಕ್ಕೂ ನ್ಯಾಯ ಕೊಡಲಿಲ್ಲ. ಕನಕ ಜಯಂತಿ ಮಾಡಿದ್ದು ಯಡಿಯೂರಪ್ಪ. ಕನಕ ಪೀಠಕ್ಕೆ ಅನುದಾನ ಕೊಟ್ಟಿದ್ದು ಯಡಿಯೂರಪ್ಪ ಸರ್ಕಾರ. ಹಿಂದುಳಿದ ವರ್ಗಗಳಿಗೆ ಆ ಮಾಜಿ ಸಿಎಂ ಏನು ಮಾಡಿದರು? ನಾರಾಯಣಗುರು ನಿಗಮ ಮಾಡಿದ್ದು ಬೊಮ್ಮಾಯಿ ಸರ್ಕಾರ ಎಂದು ಹೊಗಳಿದರು. ಇದನ್ನೂ ಓದಿ: ಕಾಮಣ್ಣನ ಪ್ರತಿಷ್ಠಾಪನೆಗೆ ನಿರಾಕರಣೆ- ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಹುಬ್ಬಳ್ಳಿ ಈದ್ಗಾ ಮೈದಾನ