ಹಾವೇರಿ: ಸಿದ್ದರಾಮಯ್ಯನವರ (Siddaramaiah) ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Naleen Kumar Kateel) ಕಿಡಿಕಾರಿದ್ದಾರೆ.
ಬಿಜೆಪಿ ಸಂಕಲ್ಪ ಯಾತ್ರೆ ಸುಳ್ಳಿನ ಯಾತ್ರೆ (BJP Sankalpa Yatra) ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ. ಸಿದ್ದರಾಮಯ್ಯನ ಜೀವಮಾನದಲ್ಲಿ ಸತ್ಯ ಯಾವುದು ಹೇಳುತ್ತಾರೆ ಅಂದರೆ ನಾನು ಸಿದ್ದರಾಮಣ್ಣ ಅನ್ನೋದನ್ನು ಮಾತ್ರ ಸತ್ಯ ಹೇಳುತ್ತಾರೆ. ಬಾಕಿದೆಲ್ಲ ಸುಳ್ಳು ಹೇಳುತ್ತಾರೆ. ಸುಳ್ಳು ಸಿದ್ದರಾಮಣ್ಣ. ಅವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಸುಳ್ಳು ಯಾತ್ರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ
Advertisement
Advertisement
ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಅಕ್ಟೋಬರ್ 11ರಂದು ಹಲ್ಲೆಗೆ ಒಳಗಾಗಿದ್ದ ಐವರು ಆರ್‌ಎಸ್‍ಎಸ್ ಕಾರ್ಯಕರ್ತರನ್ನು (RSS Workiers) ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ರಟ್ಟೀಹಳ್ಳಿಯಲ್ಲಿ ಆರ್‌ಎಸ್‍ಎಸ್ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ವರ್ಷದಲ್ಲಿ ಎರಡು ಬಾರಿ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ವ್ಯಕ್ತಿ ನಿರ್ಮಾಣದ ಶಿಬಿರ ನಡೆಯುತ್ತದೆ. ಅಕ್ಟೋಬರ್ 11ರ ರಾತ್ರಿ ಐವರು ಆರ್‌ಎಸ್‍ಎಸ್ ಕಾರ್ಯಕರ್ತರು ಪಥಸಂಚಲನದ ಮಾರ್ಗ ವೀಕ್ಷಣೆಗೆ ಹೋಗಿದ್ದರು. ವೀಕ್ಷಣೆಗೆ ತೆರಳಿದ್ದ ಐವರ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡಿದ್ದರು. ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
Advertisement
Advertisement
ಇದೊಂದು ದುರದೃಷ್ಟಕರ ಘಟನೆ. ಐವರು ಸಜ್ಜನ ವ್ಯಕ್ತಿಗಳು. ರಸ್ತೆ ಮೇಲೆ ಹೋಗುತ್ತಿದ್ದಾಗ ವಿನಾಕಾರಣ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಇದೊಂದು ಮುಸ್ಲಿಂ ಮೂಲಭೂತವಾದದ ಮಾನಸಿಕತೆ ತೋರಿಸುತ್ತದೆ. ಇದನ್ನು ಸಹಿಸಲು ಅಸಾಧ್ಯ. ಅದೇನು ಪಾಕಿಸ್ತಾನವಲ್ಲ. ಪಾಕಿಸ್ತಾನದಲ್ಲೂ ಸ್ವತಂತ್ರವಾಗಿ ಹೋಗಬಹುದು. ಯಾವ ಏರಿಯಾದಲ್ಲಿ ಎಷ್ಟೋತ್ತಿಗೆ ಹೋಗಬಹುದು ಎನ್ನುವುದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ನಮ್ಮ ಸರ್ಕಾರ ಈ ಘಟನೆ ಸಹಿಸುವುದಿಲ್ಲ. ಈಗಾಗಲೇ ಇಪ್ಪತ್ತೊಂದು ಜನರನ್ನು ಬಂಧಿಸಲಾಗಿದೆ. ಈ ಘಟನೆಗೆ ತಕ್ಷಣ ಸರ್ಕಾರ ಸ್ಪಂದಿಸಿದೆ. ಸಿಎಂ ಮತ್ತು ಗೃಹ ಸಚಿವರು ಸ್ಪಂದಿಸಿದ್ದಾರೆ. ಹಲ್ಲೆಗೊಳಗಾದವರ ಜೊತೆ ಈಗ ನಾನು ಮಾತನಾಡಿ ಬಂದಿದ್ದೇನೆ. ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡುವ ಶಾಂತಿ ವಂಚಕರಿಗೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’
ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನೂ ಪತ್ತೆ ಮಾಡಬೇಕು. ಇದರ ಹಿಂದೆ ಯಾವ ಶಕ್ತಿಗಳಿದ್ದಾವೆ ಅದನ್ನು ತನಿಖೆ ಮಾಡಬೇಕು. ಇದರಲ್ಲಿ ಯಾರ್ಯಾರಿದ್ದಾರೆ. ಸರ್ಕಾರ ಯಾವುದಿದೆ ಎನ್ನುವ ಪ್ರಶ್ನೆ ಅಲ್ಲ. ನಮ್ಮ ಸರ್ಕಾರ ಇಂಥವರ ಮೇಲೆ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪಿಎಸ್‍ಐ ಸಂಘಟನೆ ಬ್ಯಾನ್ ಮಾಡಿದೆ ಎಂದು ಹೇಳಿದ್ದಾರೆ.