ಧಾರವಾಡ: ಕಾಂಗ್ರೆಸ್ (Congress) ಪಕ್ಷ ಗಾಂಧಿ ಟೋಪಿಯನ್ನು ಮುಂದಿಟ್ಟುಕೊಂಡು ಇಡೀ ಸಮಾಜಕ್ಕೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel) ವಾಗ್ದಾಳಿ ನಡೆಸಿದರು.
Advertisement
ಧಾರವಾಡದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರವಾದವನ್ನು ಬದಿಗಿಟ್ಟು ಪರಿವಾರ ವಾದವನ್ನು ಮುಂದಿಟ್ಟಿತ್ತು. ಮಹಾತ್ಮ ಗಾಂಧಿಗೂ ಹಾಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಯಾರಾದರೂ ಹೇಳಬಲ್ಲಿರಾ?. ದೇಶವನ್ನು ಜೋಡಿಸಿದವರು ಯಾರು, ವಿಭಜನೆ ಮಾಡಿದವರು ಯಾರು ಎಂಬುದು ಜನತೆಗೆ ಗೊತ್ತಿದೆ. ಇದೀಗ ಕಾಂಗ್ರೆಸ್ ಭಾರತ್ ಜೋಡೋ (Bharat Jodo Yatra) ಯಾತ್ರೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಜನರಿಂದ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ ಬಳಕೆ – ಅಯ್ಯೂಬ್ ವಿರುದ್ಧ ಇಡಿ ಚಾರ್ಜ್
Advertisement
Advertisement
ಜಾತಿ ಹೆಸರಿನಲ್ಲಿ ಈ ದೇಶವನ್ನು ಇಬ್ಭಾಗ ಮಾಡಲಾಯಿತು, ಅದೇ ರೀತಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಈ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದವರು ವಾಜಪೇಯಿ. ಈಗ ಅದೇ ರಸ್ತೆಯಲ್ಲಿ ರಾಹುಲ್ ಗಾಂಧಿ (Rahul Gandhi) ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಹಾಗೂ ಉತ್ತರವನ್ನು ಮೋದಿ (Narendra Modi) ಜೋಡಿಸುತ್ತಿದ್ದಾರೆ. ಒಂದು ಕಡೆ ಡಿಕೆಶಿ (D.K Shivakumar), ಇನ್ನೊಂದು ಕಡೆ ಸಿದ್ದು, ಇಬ್ಬರನ್ನೂ ಮುಗಿಸಲು ಖರ್ಗೆ ಬಣ ರೆಡಿಯಾಗಿದೆ. ಖರ್ಗೆಯನ್ನು ಸೋಲಿಸಲು ಪ್ರಯತ್ನಿಸಿದ್ದು ಸಿದ್ದರಾಮಯ್ಯ (Siddaramaiah). ಆದರೆ, ಇದೀಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಓಡಿಸಿದರು. ಬಾದಾಮಿ ಜನ ಈ ಬಾರಿ ನಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಜಾಗ ಹುಡುಕುವ ಯಾತ್ರೆ ಮಾಡಬೇಕು ಎಂದರು. ಇದನ್ನೂ ಓದಿ: 19 ವರ್ಷದ ಯುವತಿ ಅನುಮಾನಸ್ಪದ ಸಾವು- ಅತ್ಯಾಚಾರ, ಕೊಲೆ ಶಂಕೆ