ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಒಂದು ಭಯ ಕಾಡುತ್ತಿದೆ. ಬಿಜೆಪಿ ಎಲ್ಲ ಉಪಚುನಾವಣೆ ಹಾಗೂ ಮಹಾನಗರ ಚುನಾವಣೆ ಅಭೂತಪೂರ್ವ ಗೆಲುವು ಕಂಡಿದೆ. ಇದೇ ರೀತಿ ಗೆಲುವು ಹೆಚ್ಚು ಮಾಡುತ್ತಾ ಹೋದ್ರೆ ನಾವು ಶಾಶ್ವತವಾಗಿ ನಿರುದ್ಯೋಗಿಗಳಾಗುತ್ತೇವೆ ಎಂಬ ಭಯ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
Advertisement
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 40% ಕಮಿಷನ್ ಬಗ್ಗೆ ರಾಜ್ಯಪಾಲರಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ದೂರುತ್ತಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ನಿರಂತರ ಸುಳ್ಳು ಸುದ್ದಿ, ಅಪಪ್ರಚಾರ ದೂರುಗಳನ್ನು ಕೊಡುತ್ತಿದೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೋರಾಟ ನಿಲ್ಲಿಸಿ ಮನೆಗೆ ಹೋಗಬೇಕೆಂದು ರೈತರಿಗೆ ಒತ್ತಾಯಿಸಿದ ನರೇಂದ್ರ ಸಿಂಗ್
Advertisement
Advertisement
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಅಸಭ್ಯ ವರ್ತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಅಸಭ್ಯ ವರ್ತನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಈ ಬಗ್ಗೆ ನಿರ್ದಿಷ್ಟ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತೆ. 40% ಸರ್ಕಾರದ ತನಿಖೆಗೆ ಆದೇಶ ವಿಚಾರಕ್ಕೆ ಪಾರದರ್ಶಕ ವ್ಯವಸ್ಥೆ ಅಡಿ ನಮ್ಮ ಸರ್ಕಾರ ನಡೆಯುತ್ತಿದೆ. ಇಂತಹ ಯಾವುದೇ ದೂರು ಬಂದಾಗ ಎಚ್ಚರಿಕೆಯಿಂದ ನಮ್ಮ ಸಿಎಂ ಕ್ರಮ ಕೈಗೊಂಡಿದ್ದಾರೆ. ದಾಖಲೆಗಳನ್ನು ಕೊಡಬೇಕು, ಸುಳ್ಳು ಸುದ್ದಿ ಎಷ್ಟೇ ಹೇಳಬಹುದು. ದಾಖಲೆ ಇಲ್ಲದ ಆರೋಪ ಮಾಡಿದ್ದರೂ ಕೂಡ ಆ ದೂರನ್ನು ನಿರ್ಲಕ್ಷ್ಯ ಮಾಡದೆ ನಮ್ಮ ಸಿಎಂ ಸರಿಯಾದಂತಹ ಕ್ರಮ ಕೈಗೊಂಡಿದ್ದಾರೆ. ಆ ದೂರನ್ನು ನಿರ್ಲಕ್ಷ್ಯ ಮಾಡದೇ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಟೊಮೆಟೋ ಬೆಲೆಯಲ್ಲಿ ದಿಢೀರ್ ಕುಸಿತ
Advertisement
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆರೋಪಗಳು ಬಂದಿದ್ದವು. ಅವರು ಎಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ? ಯಾವುದು ತನಿಖೆ ಆಗಿದೆ? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು. ಪಾರದರ್ಶಕವಾಗಿ ಇವತ್ತು ದೂರು ಬಂದಾಗ ನಿರ್ಲಕ್ಷ್ಯ ಮಾಡದೆ ನಮ್ಮ ಸಿಎಂ ಜವಾಬ್ದಾರಿಯಿಂದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸರ್ಕಾರದಲ್ಲಿ ದುಡ್ಡಿಲ್ಲ, ಗುತ್ತಿಗೆದಾರರಿಗೆ ಬಿಲ್ ಆಗ್ತಿಲ್ಲ ಎನ್ನುವ ಗುತ್ತಿಗೆದಾರರ ಸಂಘದ ದೂರಿಗೆ ಯಾವುದೇ ಅಧ್ಯಕ್ಷ, ಸಂಘಟನೆ ಇರಲಿ ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ನುಡಿದರು. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ
ಗ್ರಾಪಂಗಳಿಗೆ ತಲಾ 40 ಲಕ್ಷ ಕೋಟಿ ರೂಪಾಯಿ ಕೊಡುತ್ತೇವೆ ಎಂಬ ತನ್ನ ಹೇಳಿಕೆ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಮಾಹಿತಿ, ವರದಿ ತರಿಸಿಕೊಳ್ಳಿ, ನಾನೇನು ಹೇಳಿದ್ದೀನಿ ಪ್ರತಿ ಪಂಚಾಯತ್‍ಗೆ 15ನೇ ಹಣಕಾಸಿನ ಯೋಜನೆಯಡಿ ಅಭಿವೃದ್ಧಿಗೆ ಒಂದು ಕೋಟಿ ಕೊಟ್ಟಿದೆ. ನಾನು ಆ ರೀತಿ ಹೇಳಿಲ್ಲ ಎಂದು ಅಲ್ಲಗಳೆದರು. ಎಸಿಬಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ, ಭ್ರಷ್ಟಾಚಾರ ನಿಲ್ಲುತ್ತಾ ಎಂಬ ಪ್ರಶ್ನೆಗೆ, ಪಾರದರ್ಶಕವಾಗಿ ಎಸಿಬಿ ಅದರದೇ ಆದ ವ್ಯವಸ್ಥೆಯಲ್ಲಿ ಕ್ರಮ ಕೈಗೊಳ್ಳುತ್ತೆ. ಹಾಗಾಗಿ ಯಾರೇ ಭ್ರಷ್ಟಾಚಾರ ಮಾಡಿದ್ದರೂ ಕೂಡ ಉಳಿಗಾಲ ಇಲ್ಲ ಎನ್ನುವ ಭಯ ಸೃಷ್ಟಿಯಾಗಿದೆ ಎಂದರು.