ಬೆಂಗಳೂರು: ಬಿಜೆಪಿ (BJP) ಪಕ್ಷವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಕಾಂಗ್ರೆಸ್ (Congress) ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ತಿರುಗೇಟು ನೀಡಿದ್ದಾರೆ.
Advertisement
ಬೆಂಗಳೂರು ಉತ್ತರ (North Bengaluru) ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಯುವಮೋರ್ಚಾ ವತಿಯಿಂದ ನಡೆದ ಬೃಹತ್ ಯುವಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಮೋಹನ್ ಸಿಂಗ್ ಕಾಲದಲ್ಲಿ ನೀರು, ಗಾಳಿ ಸೇರಿ ಪಂಚಭೂತಗಳಲ್ಲೂ ಹಗರಣ ನಡೆದಿತ್ತು. 40% ಕಮಿಷನ್ ಎಂದು ಕಾಂಗ್ರೆಸ್ ಆರೋಪ ಹೊರಿಸುತ್ತಿದೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ವಾದ್ರ ಯಾಕೆ ಬೇಲ್‌ನಲ್ಲಿ ಇದ್ದಾರೆ? ಕೆಪಿಸಿಸಿ (KPCC) ಅಧ್ಯಕ್ಷರು ಕರ್ನಾಟಕದ (Karnataka) ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ (Tihar Jail) ಹೋದ್ರಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ಮೂರನೇ ಬಾರಿಗೆ ಛತ್ರಪತಿ ಶಿವಾಜಿ ಪ್ರತಿಮೆಗೆ ಎಂಇಎಸ್‌ನಿಂದ ಪೂಜೆ
Advertisement
Advertisement
ಡಿ.ಕೆ.ಶಿವಕುಮಾರ್ (D.K.Shivakumar) ಇಂಧನ ಸಚಿವರಾಗಿದ್ದಾಗ ರೈತರ ಪಂಪ್‌ಸೆಟ್‌ಗೆ 10 ಸಾವಿರ ರೂ. ಫೈನ್ ಹಾಕಲಾಗಿತ್ತು. ಸುಳ್ಯದಲ್ಲಿ (Sullia) ರೈತರೊಬ್ಬರು ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿ ಕರೆಂಟ್ ಕೇಳಿದಾಗ, ಭಯೋತ್ಪಾದಕನ ಮನೆಗೆ ನುಗ್ಗುವಂತೆ ಪೊಲೀಸ್ ನುಗ್ಗಿ ಅವರನ್ನು ಎಳೆದೊಯ್ದು ಜೈಲಿಗೆ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್
Advertisement
ಕೋಲಾರದಲ್ಲಿ (Kolar) ಸಿದ್ದರಾಮಯ್ಯ (Siddaramaiah) ಸ್ಪರ್ಧೆಯಿಂದ ಹಿಂದೆ ಸರಿದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮಿ ಸಿದ್ದರಾಮಯ್ಯನವರೇ ನಿಮಗೆ ನಿಮ್ಮ ಸೀಟ್‌ನದ್ದೇ ಗ್ಯಾರಂಟಿ ಇಲ್ಲ. ಒಬ್ಬ ಸಿಎಂ ಆಗಿದ್ದವರಿಗೆ ಚುನಾವಣೆಗೆ ನಿಲ್ಲುವ ಯೋಗ್ಯತೆಯಿಲ್ಲ. ಇನ್ನೇನು ಗ್ಯಾರಂಟಿ ಕೊಡುತ್ತೀರಿ ನೀವು? ಕಾಂಗ್ರೆಸ್‌ಗೆ ಈ ರೀತಿಯಾದ ಹೀನಾಯ ಸ್ಥಿತಿ ಬರಬಾರದಿತ್ತು. ಒಬ್ಬ ಸಿಎಂ ಆಗಿ ಆಡಳಿತ ಮಾಡಿದವರಿಗೆ ಇಂದು ಚುನಾವಣೆಗೆ (Election) ನಿಲ್ಲಲು ಜಾಗವಿಲ್ಲ ಎಂದರೆ ಅವರ ಆಡಳಿತ ಎಂತಹದ್ದು ಎಂದು ಗೊತ್ತಾಗುತ್ತದೆ. ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲಿ ಸೀಟ್ ಸಿಗುವುದೇ ಇಲ್ಲ ಎಂದು ಅನಿಸುತ್ತಿದೆ ಎಂದರು. ಇದನ್ನೂ ಓದಿ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಕೇಸ್ – ಎಚ್ಚರಿಕೆ ನೀಡಿ ಯುವಕನಿಗೆ ಜಾಮೀನು ನೀಡಿದ ಪೊಲೀಸರು
ಕಾಂಗ್ರೆಸ್ ಕಚೇರಿಯಲ್ಲಿ ಬರೀ ಜಯಂತಿಗಳ ಆಚರಣೆ ಅಷ್ಟೇ ನಡೆಯುತ್ತಿದೆ. ಬೇರೆ ಯಾವುದೇ ಕಾರ್ಯಕ್ರಮಗಳು ಪಕ್ಷದಲ್ಲಿ ನಡೆಯುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಯುವಕರ ತಂಡ ಇಲ್ಲ. 80 ವರ್ಷದ ಖರ್ಗೆ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುದುಕರ ಪಾರ್ಟಿ. ಕಾಂಗ್ರೆಸ್ ವೃದ್ಧಾಶ್ರಮಕ್ಕೆ ಸೇರುವ ಪಕ್ಷ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸೋಮವಾರ ಬೆಂಗಳೂರಿನಲ್ಲಿ ಸಂಪೂರ್ಣ ಆಟೋ ಬಂದ್
ಮತ್ತೊಮ್ಮೆ ಮೋದಿ (Narendra Modi) ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದಾವಣಗೆರೆ (Davanagere) ಮತ್ತು ಬೆಂಗಳೂರಿನಲ್ಲಿ ರೋಡ್ ಶೋ (Road Show) ಇರಲಿದೆ ಎಂದರು. ಅಲ್ಲದೇ ಉರಿಗೌಡ-ನಂಜೇಗೌಡ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮುನಿರತ್ನ ಅವರನ್ನೇ ಕೇಳಿ ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ – ವಿವರ ಪಡೆಯಲು ರಾಗಾ ಮನೆಗೆ ಆಗಮಿಸಿದ ಪೊಲೀಸರು