ಬೆಂಗಳೂರು: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಪಕ್ಷದ ಮೇಲೆ ಹಿಡಿತ ಸಾಧಿಸಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನ ಸೈಡ್‍ಲೈನ್ ಮಾಡಿದ್ರಾ ಎಂಬ ಪ್ರಶ್ನೆಯೊಂದು ಕಮಲ ಅಂಗಳದಲ್ಲಿ ಮೂಡಿದೆ.
ಇಂದು ಬಿಬಿಎಂಪಿಗೆ ನೂತನ ಸಾರಥಿಗಳ ಆಯ್ಕೆ ಸಂಬಂಧ ಬಿಜೆಪಿ ಸಭೆ ಕರೆದಿದೆ. ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೆ ಯಡಿಯೂರಪ್ಪರಿಗೂ ಆಹ್ವಾನ ನೀಡಲಾಗಿದೆ. ಸಿಎಂ ಅಭ್ಯರ್ಥಿಗಳ ಆಯ್ಕೆಗೆ ಶಾಸಕ ಎಸ್.ರಘು ನೇತೃತ್ವದ ಸಮಿತಿಯನ್ನು ರಚಿಸಿದ್ದರು. ಶಿಫಾರಸ್ಸಿನ ಮೂಲಕ ಸಿಎಂ ಒಕ್ಕಲಿಗ ಸಮುದಾಯದ ತಮ್ಮ ನಿಷ್ಠರಿಗೆ ಮೇಯರ್ ಹುದ್ದೆ ಕೊಡಲು ಮುಂದಾಗಿದ್ದರು. ಸಮಿತಿ ಏನೇ ಶಿಫಾರಸ್ಸು ನೀಡಿದ್ರೂ ಪಕ್ಷದ ತೀರ್ಮಾನವೇ ಅಂತಿಮ ಎಂಬ ಸಂದೇಶವನ್ನು ಕಟೀಲ್ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ
Advertisement
Advertisement
ಖಡಕ್ ಸಂದೇಶ ರವಾನಿಸಿರುವ ನಳಿನ್ ಕುಮಾರ್ ಕಟೀಲ್ ಹೈಕಮಾಂಡ್ ಸೂಚನೆ ಮೇರೆಗೆ ಸಂಘದ ನಿಷ್ಠರಿಗೆ ಬಿಬಿಎಂಪಿ ಮೇಯರ್ ಹುದ್ದೆ ಅಭ್ಯರ್ಥಿಯಾಗುವ ಅವಕಾಶ ನೀಡಲು ತೀರ್ಮಾನಿಸಿದ್ದಾರಂತೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸರಗೊಂಡಿರುವ ಸಿಎಂ ಇಂದು ನಡೆಯುವ ಬಿಬಿಎಂಪಿ ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಸಭೆ ಹಾಜರಾಗ್ತಾರಾ ಅಥವಾ ಗೈರಾಗ್ತಾರಾ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ
Advertisement
ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ದಾವಣಗೆರೆಯಲ್ಲಿ ಸಿಎಂ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಪರೋಕ್ಷವಾಗಿ ತಮ್ಮ ಮೇಲಿರುವ ಒತ್ತಡಗಳನ್ನು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಬಿಜೆಪಿಗೆ ಬೇಡವಾದ್ರಾ ಬಿಎಸ್‍ವೈ?