ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ 63ನೇ ಸಿಸಿಎಚ್ ನ್ಯಾಯಾಲಯ ನಲಪಾಡ್ ಮತ್ತು ತಂಡದ ಜಾಮೀನು ಅರ್ಜಿ ವಜಾ ಮಾಡಿದೆ. ಹೀಗಾಗಿ ನಲಪಾಡ್ ಗಳಗಳನೆ ಅಳಲು ಶುರುಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮುಖ್ಯವಾಗಿ ಈ ಕೆಳಗಿನ ನಾಲ್ಕು ಕಾರಣಗಳಿಂದ ಅರ್ಜಿ ವಜಾಗೊಂಡಿದೆ ಅಂತಾ ಹೇಳಲಾಗಿದೆ. ನಲಪಾಡ್ ಜಾಮೀನು ಅರ್ಜಿ ವಜಾಗೊಳ್ಳಲು ಪ್ರಮುಖವಾದ ಅಂಶಗಳು ಈ ಕೆಳಗಿನಂತಿವೆ.
Advertisement
ಪ್ರಮುಖವಾದ ಅಂಶಗಳು:
1. ಹಲ್ಲೆಗೊಳಗಾಗಿರುವ ವಿದ್ವತ್ ಇನ್ನೂ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿಲ್ಲ. ತನಿಖಾಧಿಕಾರಿ ಮುಂದೆ ನಲಪಾಡ್ ನಿಂದ ಆದ ಹಲ್ಲೆ ಬಗ್ಗೆ ವಿವರಿಸುವ ಸ್ಥಿತಿಯಲ್ಲಿ ವಿದ್ವತ್ ಇಲ್ಲ.
2. ವಿದ್ವತ್ ಇನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ.
Advertisement
3. ನಲಪಾಡ್ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
4. ಶಾಸಕ ಹ್ಯಾರಿಸ್ ಮಗ ನಲಪಾಡ್ ಪ್ರಭಾವಿ, ಜಾಮೀನು ನೀಡಿದ್ರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ.
Advertisement
ನಲಪಾಡ್ ಮತ್ತು ಗ್ಯಾಂಗ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಸೋಮವಾರ ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಅಂತಾ ನಲಪಾಡ್ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ಹೇಳಿದ್ದಾರೆ. ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಜೈಲಿನ ಅಧೀಕ್ಷಕರ ಕೊಠಡಿಯಲ್ಲಿ ಟಿವಿ ನೋಡುತ್ತಿದ್ದ ನಲಪಾಡ್ ನನ್ನ ಹಣೆ ಬರಹವೇ ಸರಿ ಇಲ್ಲ ಅಂತಾ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.