ಮೈಸೂರು: ಮಾಜಿ ಸಂಸದೆ ರಮ್ಯಾಗೆ ನನ್ನ ಮೇಲೆ ಕೋಪ ಇದ್ದರೆ ಬೈಯಲಿ. ಆದರೆ ಟ್ವೀಟ್ ಮಾಡುವ ಮೂಲಕ ಬೇಡ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮ್ಯಾ ಅವರು ನಮ್ಮ ಪಕ್ಷದ ಮಾಜಿ ಸಂಸದೆ ಅಂತಾ ಗೊತ್ತು. ಆದರೆ ಈಗ ಏನೂ ಅಂತಾ ಗೊತ್ತಿಲ್ಲ. ರಮ್ಯಾ ಈಗ ನಮ್ಮ ಪಕ್ಷದಲ್ಲಿ ಯಾವ ಜವಾಬ್ದಾರಿಯಲ್ಲೂ ಇಲ್ಲ ಎಂದು ತಿಳಿಸಿದರು.
Advertisement
Advertisement
ನಮ್ಮ ನಾಯಕರ ವಿರುದ್ಧ ರಮ್ಯಾ ಟ್ವೀಟ್ ಮಾಡಿದ ಕಾರಣ ನಾವು ಹೋರಾಟ ಮಾಡಿದ್ದೇವೆ. ರಮ್ಯಾ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ನಮಗೆ ಫೋನ್ ಮಾಡಿ ಮಾತಾಡಲಿ. ಕೋಪ ಇದ್ದರೆ ಬೈಯಲಿ. ಆದರೆ ಟ್ವೀಟ್ ನಲ್ಲಿ ಬೇಡ ಎಂದರು.
Advertisement
ನನ್ನ ಬಳಿ ರಮ್ಯಾ ಅವರ ನಂಬರ್ ಇಲ್ಲ. ಇದ್ದಿದ್ದರೆ ನಾನೇ ಮಾತಾಡುತ್ತಿದ್ದೆ. ನಾವೇನೂ ಜಗಳವಾಡುತ್ತಿಲ್ಲ. ಹೇಳಿಕೆಗೆ ಪ್ರತಿ ಹೇಳಿಕೆ ಕೊಟ್ಟಿದ್ದೇನೆ. ಇದನ್ನೆ ಜಗಳ ಅಂದರೆ ಹೇಗೆ ಎಮದು ನಲಪಾಡ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:
Advertisement
ನಲಪಾಡ್‍ಗೆ ರಮ್ಯಾ ಹೇಳಿದ್ದೇನು..?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಕ್ಕೆ ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್‍ಗೆ ಟ್ವೀಟ್ ಮೂಲಕ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಿರುಗೇಟು ನೀಡಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಮೊಹಮ್ಮದ್ ನಲಪಾಡ್ ಮೇಲಿರುವ ಆರೋಪದ ಸುದ್ದಿಗಳ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ರಮ್ಯಾ, ನಲಪಾಡ್ ವಿರುದ್ಧ ಹರಿಹಾಯ್ದಿದ್ದರು.
ಈತ ಮೊಹಮ್ಮದ್ ನಲಪಾಡ್. ಗೌರವಾನ್ವಿತ ಶಾಸಕ ಹ್ಯಾರಿಸ್ ಅವರ ಪುತ್ರ. ಯುವ ಕಾಂಗ್ರೆಸ್ ಅಧ್ಯಕ್ಷರೂ ಕೂಡ. ಬೇಲ್ ಮೇಲೆ ಹೊರಗಿರುವ ನಲಪಾಡ್ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಕುಟುಕಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲೇ ವಧು ನಿಗೂಢ ಸಾವು
ರಮ್ಯಾ ಎಂಟ್ರಿ: ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಅವರನ್ನು ಶಾಸಕ ಎಂ.ಬಿ.ಪಾಟೀಲ್ ಗೌಪ್ಯವಾಗಿ ಭೇಟಿಯಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ರಮ್ಯಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಭೇಟಿಯಲ್ಲಿ ಸಮಸ್ಯೆ ಏನಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ರಮ್ಯಾ ವಿರುದ್ಧ ನಲಪಾಡ್ ಹರಿಹಾಯ್ದಿದ್ದರು. ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲಿಯೂ ಇಲ್ಲದ ರಮ್ಯಾ ಹಠಾತ್ ಯಾಕೆ ಬಂದರು? ಯಾವ ಕುರ್ಚಿಯ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರೆ ಎಂದು ಮೊಹಮ್ಮದ್ ನಲಪಾಡ್ ಉಡುಪಿಯಲ್ಲಿ ಟಾಂಗ್ ಕೊಟ್ಟಿದ್ದರು.