ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಆರ್.ವಿ ದೇವರಾಜ್ ಪುತ್ರ ಯುವರಾಜ್ ಸಿಸಿಬಿ ಪೋಲಿಸರ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆಯನ್ನು ನೀಡಿದ್ದಾರೆ.
ಮಂಗಳವಾರ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಸಿಸಿಬಿ ಕಚೇರಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದಾಖಲಿಸಿದ್ರು. ಈ ವೇಳೆ ಸುನಿಲ್ ಬೋಸ್ ಮೂವರು ಪ್ರಭಾವಿ ರಾಜಕಾರಣಿಗಳ ಪುತ್ರರು ಹಲ್ಲೆ ನಡೆದ ದಿನದಂದು ಫರ್ಜಿ ಕೆಫೆಯಲ್ಲಿ ಇದ್ದರೆಂದು ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಘಟನೆ ವೇಳೆ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಸಹ ಇದ್ದರು ಎಂಬುದು ಸಿಸಿಬಿ ಪೊಲೀಸರಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ವಿಚಾರಣೆ
Advertisement
Advertisement
ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಯುವರಾಜ್ ದೌಡಾಯಿಸಿ ಫರ್ಜಿ ಕೆಫೆಯಲ್ಲಿ ಗಲಾಟೆ ನಡೆಯುವ ಅರ್ಧ ಗಂಟೆ ಮುಂಚೆ ಊಟ ಮಾಡಲೆಂದು ಸ್ನೇಹಿತರ ಜೊತೆ ತೆರಳಿದ್ದೆ. ಗಲಾಟೆ ಗದ್ದಲ ನಡೆಯುತ್ತಿದ್ದಂತೆ ಅಲ್ಲಿಂದ ಹೊರ ಬಂದೆವು. ನಾನು ಫರ್ಜಿ ಕೆಫೆಗೆ ಹೋಗುವ ಮೊದಲೆ ಗಲಾಟೆ ನಡೆದಿತ್ತು. ನಾನು ಕೆಫೆಗೆ ಹೋದಾಗ ಗಲಾಟೆ ವಿಚಾರ ನನಗೆ ತಿಳಿಸಿದ್ದು ಅಂಬರೀಶ್ ಮಗ ಅಭಿಷೇಕ್. ಒಂದು ವೇಳೆ ಗಲಾಟೆ ವೇಳೆ ತಾನು ಅಲ್ಲೆ ಇದ್ದಿದ್ದರೆ ಗಲಾಟೆ ನಡೆಯಲು ಬಿಡುತ್ತಿರಲಿಲ್ಲಾ ಎಂದು ಯುವರಾಜ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಯುವರಾಜ್ ಸದ್ಯ ಸುದಾಮನಗರ ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ. ಹೇಳಿಕೆ ಪಡೆದ ಸಿಸಿಬಿ ಪೊಲೀಸರು ಯುವರಾಜ್‍ರನ್ನು ವಾಪಾಸ್ಸು ಕಳುಹಿಸಿದ್ದಾರೆ.