ಬೆಂಗಳೂರು: ವಿದೇಶಕ್ಕೆ ತೆರಳಲು ತನಗೆ ಅನುಮತಿ ನಿಡಿ ಅಂತ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಹೈಕೋರ್ಟ್ ಮೊರೆ ಹೋಗಿದ್ದಾನೆ. ವಿದ್ವತ್ ಮೇಲೆ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳ ಸಡಿಲಿಕೆ ಕೋರಿ ನಲಪಾಡ್ ಈ ಅರ್ಜಿ ಸಲ್ಲಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ವೇಳೆ ನಗರ ಬಿಟ್ಟು ತೆರಳದಂತೆ ನಲಪಾಡ್ ಗೆ ಕೋರ್ಟ್ ಷರತ್ತು ವಿಧಿಸಿತ್ತು. ಇದೀಗ ನನ್ನ ಸಹೋದರ ಲಂಡನ್ ನಲ್ಲಿ ವಾಸವಾಗಿದ್ದಾನೆ. ಹೀಗಾಗಿ ತಮ್ಮನನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿ. 15 ದಿನಗಳ ಕಾಲ ವಿದೇಶಕ್ಕೆ ಪ್ರಯಾಣ ಬೆಳೆಸಲು ಅವಕಾಶ ನೀಡಿ ಅಂತ ಮನವಿ ಮಾಡಿಕೊಂಡಿದ್ದಾನೆ.
Advertisement
ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 27 ಕ್ಕೆ ಮುಂದೂಡಿದೆ. ಇದನ್ನೂ ಓದಿ: ಕಷ್ಟ ಅಂದ್ರೆ ಏನು ಅನ್ನೋದು ಗೊತ್ತಾಗಿದೆ, ರಾತ್ರಿ 9 ಗಂಟೆಯ ನಂತ್ರ ಎಲ್ಲಿಗೂ ಬರಲ್ಲ: ನಲಪಾಡ್
Advertisement
Advertisement
ಏನಿದು ಪ್ರಕರಣ?:
ನಗರದ ಫರ್ಜಿ ಕೆಫೆ ಯಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಕೊಟ್ಟಿದ್ದಾನೆ. ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು. ಇದನ್ನೂ ಓದಿ: ನಮ್ಮ ಅಣ್ಣನಿಗೆ ಹೊಡೆದಿದ್ದೆ ಸಾಕು, ನನ್ನ ಬಿಟ್ಬಿಡಿ- ನಲಪಾಡ್ ಸಹೋದರ
Advertisement
ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿತ್ತು?
ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಜಾಮೀನು ರಹಿತ ಕೇಸಾಗಿದ್ದು ಉಳಿದ ಸೆಕ್ಷನ್ ಗಳಾದ 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಜಾಮೀನು ಸಿಗುವ ಕೇಸುಗಳಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv