ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಿಧನಹೊಂದಿದ ನಾಗರಿಕರ ಭಾವಚಿತ್ರ, ಫ್ಲೆಕ್ಸ್, ಬ್ಯಾನರ್ ಮತ್ತು ಹುಟ್ಟುಹಬ್ಬ ಮತ್ತು ಇನ್ನಿತರ ಹಬ್ಬಗಳ ಶುಭಾಶಯಗಳನ್ನು ಹೇಳುವ ಪೋಸ್ಟರ್ ಗಳು ಎಲ್ಲ ಕಡೆ ಕಾಣಿಸುತ್ತಿದೆ. ಈ ಹಿನ್ನೆಲೆ ಆಕ್ರೋಶಗೊಂಡ ನೈಜ ಹೋರಾಟಗಾರರ ವೇದಿಕೆ ಬಿಬಿಎಂಪಿ ಅಧಿಕಾರಿಗಳ ಕಾರ್ಯ ಕುರಿತು ವ್ಯಂಗ್ಯವಾಗಿ ಪತ್ರ ಬರೆದಿದ್ದಾರೆ.
Advertisement
ಪತ್ರದಲ್ಲಿ ಏನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಿಧನಹೊಂದಿದ ನಾಗರಿಕರ ಭಾವಚಿತ್ರ, ಫ್ಲೆಕ್ಸ್, ಬ್ಯಾನರ್, ಮತ್ತು ಹುಟ್ಟುಹಬ್ಬ ಮತ್ತು ಇನ್ನಿತರ ಹಬ್ಬಗಳ ಶುಭಾಶಯಗಳನ್ನು ಹೇಳುವ ಪೋಸ್ಟರ್ ಗಳನ್ನು ‘ಹೆಚ್ಚಿಸುವ ಬಗ್ಗೆ’.
Advertisement
ಈ ಮೇಲ್ಕಂಡ ವಿಷಯದನ್ವಯ ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಬಿಬಿಎಂ ಎಲ್ಲ ವಾರ್ಡುಗಳಲ್ಲಿ ಫ್ಲೆಕ್ಸುಗಳು, ಬ್ಯಾನರ್ ಗಳು, ಕಟೌಟ್ ಗಳು ಮತ್ತು ಪೋಸ್ಟರ್ ಗಳು ರಾರಾಜಿಸುತ್ತಿವೆ. ಇಷ್ಟೊಂದು ಕಡಿಮೆ ಸಂಖ್ಯೆಯ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಗಳು ಇರುವುದು ತುಂಬಾ ವಿಷಾದನೀಯವಾಗಿದೆ. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
Advertisement
ಆದುದರಿಂದ ತಾವು ಆಡಳಿತಾಧಿಕಾರಿಯಾಗಿ ಮತ್ತು ಆಯುಕ್ತರಾಗಿ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು ಮತ್ತು ಶ್ರೀಮಂತ ವರ್ಗದವರ ಸೇವೆಯನ್ನು ಮುತುವರ್ಜಿಯಿಂದ ಸಲ್ಲಿಸುತ್ತಿರುವುದು ನಮಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಿಮ್ಮ ಸೇವಾ ಮನೋಭಾವವನ್ನು ಕಂಡ ನಮಗೆ ಸಂತೋಷವನ್ನುಂಟು ಮಾಡಿದೆ.
Advertisement
ಮುಂಬರುವ ಹಬ್ಬಹರಿದಿನಗಳ ಶುಭಾಶಯಗಳನ್ನು ಅವರು ಫ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲಿ ಹಾಕದೆ ಇದ್ದಲ್ಲಿ, ನಗರದ ನಾಗರಿಕರು ಹಬ್ಬವನ್ನು ಆಚರಿಸುವುದು ತುಂಬಾ ಕಷ್ಟವಾಗುತ್ತದೆ. ಬೆಂಗಳೂರು ನಗರದಾದ್ಯಂತ ಇನ್ನೂ ಹೆಚ್ಚು, ಹೆಚ್ಚು ರಾಜಕಾರಣಿಗಳ, ಸೆಲೆಬ್ರೆಟಿಗಳ ಮತ್ತು ನಿಧನಹೊಂದಿದ ನಾಗರಿಕರ ಭಾವಚಿತ್ರಗಳು ಪ್ರತಿಯೊಬ್ಬ ನಾಗರೀಕರ, ವಿದ್ಯಾರ್ಥಿ-ವಿದ್ಯಾರ್ಥಿನಿಯರ, ಶಾಲಾ ಮಕ್ಕಳ ಕಣ್ಣಿಗೆ ಬೀಳುವಂತೆ ಮತ್ತು ವಾಹನದಲ್ಲಿ ಸಂಚರಿಸುವವರಿಗೆ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಗಳನ್ನು ಹಾಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ತಮ್ಮ ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಒಂದು ಆದೇಶವನ್ನು ಮಾಡಿ ಎಂಬುದು ನಮ್ಮ ಆಶಯವಾಗಿದೆ.
ಶಾಸಕಾಂಗ ಮತ್ತು ಜನಪ್ರತಿನಿಧಿಗಳಿಗೆ ನಿಮ್ಮ ಸೇವಾಕಾರ್ಯಗಳನ್ನು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು. ಅವರ ಫ್ಲೆಕ್ಸ್, ಬ್ಯಾನರ್, ಕಟೌಟ್, ಪೋಸ್ಟರ್ ಗಳು ಸಾರ್ವಜನಿಕವಾಗಿ ಪ್ರದರ್ಶಿಸುವಲ್ಲಿ ನೀವು ಅವರ ನಿರೀಕ್ಷೆಯಂತೆ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲದಿರುವುದು ಅವರ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ.
ಅದಕ್ಕೆ ತಕ್ಷಣ ಈ ಕುರಿತು ಸರಿಯಾದ ತೀರ್ಮಾನ ತೆಗದುಕೊಳ್ಳಬೇಕು. ಇನ್ನಷ್ಟು ಫ್ಲೆಕ್ಸ್, ಬ್ಯಾನರ್, ಕಟೌಟ್, ಪೋಸ್ಟರ್ ಗಳನ್ನು ನಗರದಾದ್ಯಂತ ಹಾಕಲು ಜನಪ್ರತಿನಿಧಿಗಳಿಗೆ ರಾಜಕಾರಣಿಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಅವರು ಇದ್ದಲ್ಲಿ ತಾವು ಖುದ್ದಾಗಿ ಹೋಗಿ ವಿನಮ್ರವಾಗಿ ಅವರ ಪಾದ ಚರಣಗಳಿಗೆ ನಮಸ್ಕರಿಸಿ ಮನವಿ ಮಾಡಿಕೊಳ್ಳುವಂತೆ ನಾವು ನಿಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ.
ಇದಕ್ಕೆ ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶಗಳು ಏನೇ ಇದ್ದರೂ ಸಹಿತ, ನೀವು ಜನಪ್ರತಿನಿಧಿಗಳ ಸೇವೆಗಾಗಿ ಹುಟ್ಟಿ ಬಂದಿರುವಂತೆ ಮೇಲ್ನೋಟಕ್ಕೆ ನಮಗೆ ಕಂಡುಬಂದಿದೆ. ನ್ಯಾಯಾಲಯಗಳು ಕೂಡ ನಿಮ್ಮನ್ನು ಏನು ಮಾಡಲು ಸಾಧ್ಯವಿಲ್ಲ.
ಇಂತಹ ನ್ಯಾಯಾಲಯಗಳ ಎಷ್ಟು ಆದೇಶಗಳನ್ನು ಮೂಲೆಗುಂಪು ಮಾಡಿದ ನಿಮಗೆ ಈ ವಿಷಯದಲ್ಲಿ ನಾವು ಇನ್ನು ಹೆಚ್ಚಿನದಾಗಿ ಹೇಳುವ ಅಗತ್ಯವಿರುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಸೇವೆ ರಾಜಕಾರಣಿಗಳಿಗೆ, ಪ್ರತಿನಿಧಿಗಳಿಗೆ ಮುಡುಪಾಗಿ ಇರಲಿ ಎಂಬುದು ನಮ್ಮ ಆಶಯವಾಗಿದೆ. ಇದನ್ನೂ ಓದಿ: ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ಮೂವರು ಮಹಿಳೆಯರು ಅರೆಸ್ಟ್
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಪತ್ರ ಬರೆದಿದ್ದಾರೆ. ಈ ರೀತಿ ಪತ್ರ ಬರೆಯುವುದರ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ತಮ್ಮ ಕೆಲಸವನ್ನು ಕೇವಲ ದುಡ್ಡಿರುವವರಿಗೆ ಮಾತ್ರ ಸೀಮಿತವಾಗುತ್ತಿದೆ. ಸಾಮಾನ್ಯರಿಗೆ ಅದರಿಂದ ಆಗುತ್ತಿರುವ ಸಮಸ್ಯೆ ನಿಮಗೆ ಚಿಂತೆಯಿಲ್ಲ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಪತ್ರದ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ಕರ್ತವ್ಯ ಪ್ರಜ್ಞೆ ಮೂಡಿಸಲು ವೇದಿಕೆ ಪ್ರಯತ್ನಿಸಿದೆ.