ಚೆನ್ನೈ: ತಮಿಳುನಾಡಿನ (Tamil Nadu) ತಿರುನಲ್ವೇಲಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ (Nainar Nagendran) ಅವರು ಪಕ್ಷದ ರಾಜ್ಯಾಧ್ಯಕ್ಷ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ರಾಜ್ಯ ಉಪಾಧ್ಯಕ್ಷರಾಗಿರುವ ನಾಗೇಂದ್ರನ್ ಅವರು ಈ ಹಿಂದೆ ಎಐಎಡಿಎಂಕೆಯಲ್ಲಿದ್ದರು. ಟಿ.ನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಕಮಲಾಲಯದಲ್ಲಿ ನಾಪಪತ್ರ ಸಲ್ಲಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್
- Advertisement3
ಅವರ ನಾಮನಿರ್ದೇಶನವು ಪಕ್ಷದ ಹಾಲಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವ ಎಲ್.ಮುರುಗನ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಮತ್ತು ಬಿಜೆಪಿ ಶಾಸಕಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸೇರಿದಂತೆ ಪ್ರಮುಖ ನಾಯಕರಿಂದ ಅನುಮೋದನೆ ಪಡೆದಿದೆ ಎಂದು ಪಕ್ಷ ದೃಢಪಡಿಸಿದೆ.
- Advertisement
ನಾಗೇಂದ್ರನ್ ಅವರು ಅಣ್ಣಾಮಲೈ ಅವರ ಉತ್ತರಾಧಿಕಾರಿಯಾಗಿ ನೂತನ ರಾಜ್ಯಾಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಎಐಎಡಿಎಂಕೆ ಜೊತೆಗಿನ ಅವರ ಹಿಂದಿನ ಮೈತ್ರಿ ಬಿಜೆಪಿಗೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ