ಮಾಸ್ಕೋ: ವ್ಯಕ್ತಿಯೋರ್ವನ ಹೊಟ್ಟೆಯಿಂದ 1ಕಿಲೋಗ್ರಾಂಗಿಂತಲೂ ಹೆಚ್ಚು ಮೊಳೆಗಳು, ಬೋಲ್ಟ್‌ಗಳು, ತಿರುಪು ಇರುವುದನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.
ಹೌದು, ಮದ್ಯವ್ಯಸನನಾಗಿದ್ದ ವ್ಯಕ್ತಿ, ಮದ್ಯ ಸೇವನೆಯನ್ನು ತ್ಯಜಿಸಿದ ನಂತರ ಲೋಹದಂತಹ ವಸ್ತುಗಳನ್ನು ಸೇವಿಸಲು ಆರಂಭಿಸಿದ್ದಾನೆ. ಆದರೆ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಬಾಲ್ಟಿನ್ ನಗರದ ಕ್ಲೈಪೆಡಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR
Advertisement
Advertisement
ಈ ವೇಳೆ ವ್ಯಕ್ತಿ ಹೊಟ್ಟೆಯನ್ನು ಎಕ್ಸ್ ರೇ ಮಾಡಿದ ವೈದ್ಯರಿಗೆ 4 ಇಂಚಿರುವ ಆತನ ಹೊಟ್ಟೆಯಲ್ಲಿ ಲೋಹದ ತುಂಡುಗಳಿರುವ ವಿಚಾರ ತಿಳಿದುಬಂದಿದೆ. ಮನುಷ್ಯ ದೇಹದಲ್ಲಿ ಇಷ್ಟೆಲ್ಲಾ ಇದ್ದರೂ ಆತ ಇದ್ದಾನೆ ಎಂದರೆ ಇದು ಸಾಮಾನ್ಯವಾದಂತಹ ಪ್ರಕರಣವಲ್ಲ. ಇದೊಂದು ವಿಭಿನ್ನವಾದಂತಹ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ನಂತರ ಸತತ ಮೂರಗಂಟೆಗಳ ಎಲ್ಲಾ ಲೋಹದ ವಸ್ತುಗಳನ್ನು ಹೊರ ತೆಗೆಯುವ ಮೂಲಕ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ವೈದ್ಯ ಸರುನಾಸ್ ಡೈಲಿಡೆನಾ, ಎಕ್ಸ್ ರೇ ಬಳಿಕ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ವ್ಯಕ್ತಿಯ ಹೊಟ್ಟೆಯಿಂದ ಎಲ್ಲಾ ವಿದೇಶಿ ಲೋಹಗಳನ್ನು ಹೊರತೆಗೆಯಲಾಯಿತು. ಈ ವೇಳೆ ಸಣ್ಣ, ಸಣ್ಣ ಲೋಹಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನಸಂದಣಿ ಮಧ್ಯೆಯೇ ಮಹಿಳೆ ಬರ್ಬರ ಹತ್ಯೆ – ಬೆಚ್ಚಿಬಿದ್ದ ದೆಹಲಿ ಮಂದಿ
ಈ ಸಂಬಂಧ ಕ್ಲೈಪೆಡಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಲ್ಗಿರ್ದಾಸ್ ಸ್ಪೆಪಾವಿಸಿಯಸ್ ನಾವು ಈ ರೀತಿಯ ಪ್ರಕರಣವನ್ನು ಇಲ್ಲಿಯವರೆಗೂ ನೋಡೆ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಮದ್ಯಸೆವನೆಯನ್ನು ನಿಲ್ಲಿಸಿದ ನಂತರ ಲೋಹಗಳನ್ನು ನುಂಗಲು ವ್ಯಕ್ತಿ ಆರಂಭಿಸಿದ. ಇದೀಗ ವ್ಯಕ್ತಿ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.