ಟ್ರೈಲರ್ ನಲ್ಲೇ ಮೋಡಿ ಮಾಡಿದೆ ‘ನಗುವಿನ ಹೂಗಳ ಮೇಲೆ’

Public TV
1 Min Read
Naguvina hugala mele 2

ಶ್ರೀಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ನಿರ್ಮಿಸಿರುವ, ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ (Venkat Bharadwaj)ನಿರ್ದೇಶನದ ಹಾಗೂ ಅಭಿ ದಾಸ್ –  ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ನಗುವಿನ ಹೂಗಳ ಮೇಲೆ’ (Naguvina hugala mele)ಚಿತ್ರದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದೆ.  ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಮನೆಮಾತಾಗಿರುವ ಈ ಕನ್ನಡ ಮಣ್ಣಿನ ನಿಜ ಪ್ರೇಮ ಕಥೆ  ಫೆಬ್ರವರಿ 9 ರಂದು ತೆರೆಗೆ ಬರುತ್ತಿದೆ.

Naguvina hugala mele 1

ನಿರ್ದೇಶಕ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ  ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ, ಚದಂಬರ ನರೇಂದ್ರ, ಕಬ್ಬಡಿ ನರೇಂದ್ರ‌ಬಾಬು ಹಾಗೂ ಕಿರಣ್ ನಾಗರಾಜ್ ಅವರು ರಚಿಸಿರುವ ಹಾಡುಗಳಿಗೆ ಲವ್ ಪ್ರಾಣ್ ಮೆಹ್ತಾ ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಲರ್ವಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅಭಿದಾಸ್ (Abhidas), ಶರಣ್ಯ ಶೆಟ್ಟಿ (Sharanya Shetty), ಗಿರೀಶ್ ಬೆಟ್ಟಪ್ಪ, ಹರ್ಷ ಗೋ ಭಟ್, ಬಾಲ ರಾಜವಾಡಿ, ಬೆನಕ ನಂಜಪ್ಪ, ಜ್ಯೋತಿ ಮರೂರ್, ಆಶಾ ಸುಜಯ್ ಮುಂತಾದವರು “ನಗುವಿನ ಹೂಗಳ ಮೇಲೆ” ಚಿತ್ರದಲ್ಲಿ ನಟಿಸಿದ್ದಾರೆ.

Share This Article