ಮುಂಬೈ: ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಆದರೆ ಪ್ರೀತಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ನಾಗ್ಪುರದಲ್ಲಿ ದಂಪತಿ ಸಾಬೀತು ಮಾಡಿದ್ದಾರೆ.
ನಿತಿನ್ ಬಿಯಾನಿ ಹಾಗೂ ಪತ್ನಿ ಪೂಜಾ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳು. ಆದರೆ ಈಗ ಎಂಜಿನಿಯರ್ ಕೆಲಸ ಬಿಟ್ಟು ಟೀ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
Advertisement
ಪುಣೆಯಲ್ಲಿ ಉದ್ಯೋಗದಲ್ಲಿದ್ದಾಗ ಈ ದಂಪತಿ ಪ್ರತಿ ತಿಂಗಳು 15 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದರು. ಆದರೆ ಈಗ ಎಂಜಿನಿಯರ್ ಕೆಲಸ ಬಿಟ್ಟು ಇಬ್ಬರೂ ಸೇರಿ ನಾಗ್ಪುರದ ಸಿಎ ರೋಡ್ ನಲ್ಲಿ “ಚಾಯ್ ವಿಲ್ಲಾ, ರಿಫ್ರೆಶ್ ಯುವರ್ ಸೆಲ್ಫ್” ಎಂಬ ಟೀ ಶಾಪ್ ತೆರೆದಿದ್ದಾರೆ. ಚಾಯ್ ವಿಲ್ಲಾದಲ್ಲಿ ಸುಮಾರು 15 ಕ್ಕೂ ಹೆಚ್ಚು ವಿಧದ ಟೀ ಹಾಗೂ ಕಾಫಿ ಸಿಗುತ್ತದೆ. ಅಷ್ಟೇ ಅಲ್ಲದೇ ಈ ಶಾಪ್ ನಲ್ಲಿ ಬೇರೆ ಬೇರೆ ರೀತಿಯ ಸ್ನ್ಯಾಕ್ಸ್ ಕೂಡ ಸಿಗುತ್ತದೆ.
Advertisement
Advertisement
ಸ್ನ್ಯಾಕ್ಸ್ ಗೆ ವ್ಯಾಟ್ಸಪ್ ಮತ್ತು ಝೊಮಾಟೊ ಮೂಲಕ ಆರ್ಡರ್ ಕೂಡ ತೆಗೆದುಕೊಳ್ಳುತ್ತೇವೆ. ಈ ಅಂಗಡಿಯು ಕಚೇರಿ, ಬ್ಯಾಂಕ್ ಮತ್ತು ಆಸ್ಪತ್ರೆಗಳಿಗೆ ಟೀಯನ್ನು ವಿತರಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದೇವೆ. ಬಹಳಷ್ಟು ಜನರನ್ನು ನೇಮಕ ಮಾಡಿಕೊಂಡು ನಮ್ಮ ಅಂಗಡಿಯನ್ನು ವಿಸ್ತರಿಸಲು ಬಯಸುತ್ತೇವೆ ಎಂದು ನಿತಿನ್ ಬಿಯಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಪಕೋಡಾ, ಬೋಂಡ-ಬಜ್ಜಿ ಮಾರಿ ಬದುಕು ಕಟ್ಟಿಕೊಂಡ ಮಂಡ್ಯದ ಯುವ ಎಂಜಿನಿಯರ್
Advertisement
ನಾನು ಐಬಿಎಂ ಮತ್ತು ಕಾಗ್ನಿಜೆಂಟ್ ಮುಂತಾದ ಕಂಪೆನಿಗಳಲ್ಲಿ 10 ವರ್ಷಗಳ ಕಾಲ ಎಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ. ಪತ್ನಿ ಮತ್ತು ನಾನು ಕಂಪೆನಿಯಲ್ಲಿ ಅದೇ ವೃತ್ತಿ ಮಾಡುವುದು ಸರಿ ಕಾಣಲಿಲ್ಲ. ಜೀವನದಲ್ಲಿ ಹೊಸದಾಗಿ ಬೇರೆ ರೀತಿಯಲ್ಲಿ ಕೆಲಸ ಮಾಡಿ ಬದುಕಬೇಕೆಂದು ಕನಸು ಕಂಡಿದ್ದೆವು. ಈ ಕಾರಣಕ್ಕೆ ನಾವು ಈ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ಈಗ ಪ್ರತಿ ತಿಂಗಳು 5 ಲಕ್ಷ ರೂ. ಸಂಪಾದನೆ ಮಾಡುತ್ತೇವೆ ಎಂದು ನಿತಿನ್ ಹೇಳಿದ್ದಾರೆ.
ಈ ಜಾಗ ನನಗೆ ಇಷ್ಟವಾಯಿತು. ಜೊತೆಗೆ ಇಲ್ಲಿ ವಿವಿಧ ವಿಧದ ಟೀ ಸಿಗುತ್ತದೆ ಹಾಗೂ ಒಳ್ಳೆ ದರದಲ್ಲಿ ಪಡೆಯುತ್ತೇವೆ. ಇದು ತುಂಬಾ ಆರೋಗ್ಯಕರವಾಗಿದೆ ಬಂದು ಗ್ರಾಹಕರಾದ ಹೃತಿಶ್ ಹೇಳಿದ್ದಾರೆ. ಈ ಜೋಡಿ ಸ್ವಂತ ಬಿಸಿನೆಸ್ ಶುರುಮಾಡಿ ಕೇವಲ 5 ತಿಂಗಳಾಗಿದ್ದು, ಸದ್ಯಕ್ಕೆ ತಿಂಗಳಿಗೆ 5 ಲಕ್ಷ ರೂ. ಗಳಿಸುತ್ತಿದ್ದಾರೆ.