ನಾಗ್ಪುರ: ನಾಗ್ಪುರದಲ್ಲಿ (Nagpur) ಮಹಾರಾಷ್ಟ್ರ (Maharashtra) ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ (Chandrashekhar Bawankule) ಪುತ್ರನ ಒಡೆತನದ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚಿಗೆ ನಡೆದಿತ್ತು. ಅಪಘಾತಕ್ಕೂ ಮೊದಲು ಬಾರ್‌ನಲ್ಲಿ ಇದ್ದ ಸಮಯದ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಪುತ್ರ ಸಾಂಕೇತ್ ಬವಾಂಕುಲೆ (Sanket Bawankule) ಅವರ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು, ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.ಇದನ್ನೂ ಓದಿ: ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ
Advertisement
Advertisement
ಸೋಮವಾರ ಘಟನೆ ನಡೆದು, ಮಂಗಳವಾರ ಬಾರ್ ಮ್ಯಾನೇಜರ್ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ಬಳಿಕ ಬುಧವಾರ ಡಿವಿಆರ್‌ನ್ನು (Digital Video Recorder) ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಅದನ್ನು ತನಿಖಾ ತಂಡಕ್ಕೆ ನೀಡಲಾಗಿತ್ತು.
Advertisement
ತನಿಖೆಯ ನಂತರ ಭಾನುವಾರ ರಾತ್ರಿಯಿಂದ ಸಿಸಿಟಿವಿಯಲ್ಲಿ ಯಾವುದೇ ದೃಶ್ಯಾವಳಿಗಳಿಲ್ಲ ಎಂದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಘಟನೆ ನಡೆದದ್ದು ಹೇಗೆ?
ಘಟನೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಡೆದಿದ್ದು, ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರು ಎನ್ನಲಾಗಿತ್ತು. ಆಡಿ ಕಾರು, ದೂರುದಾರ ಜಿತೇಂದ್ರ ಸೋಕಾಂಬ್ಲೆ ಕಾರಿಗೆ ಮೊದಲು ಡಿಕ್ಕಿ ಹೊಡೆದು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರರಿಬ್ಬರೂ ಗಾಯಗೊಂಡಿದ್ದರು.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್ ಚಂದ್ರ ಎತ್ತಂಗಡಿ
ಧರಂಪೇತ್‌ನ ಬಾರ್‌ನಿಂದ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದ್ದು, ಬಂಧಿತರಿಬ್ಬರನ್ನು ಹೊರತುಪಡಿಸಿ ಸಾಂಕೇತ್ ಬವಾಂಕುಲೆ ಸೇರಿದಂತೆ ಇನ್ನೂ ಮೂವರು ಕಾರಿನಲ್ಲಿದ್ದರು ಎಂದು ವರದಿಯಾಗಿದೆ.
ಆಡಿ ಕಾರು ಮಂಕಾಪುರದ ಕಡೆಗೆ ಚಲಿಸುತ್ತಿದ್ದ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಟಿ-ಪಾಯಿಂಟ್‌ನಲ್ಲಿ ಪೋಲೋ ಕಾರಿಗೂ ಡಿಕ್ಕಿ ಹೊಡೆದಿದೆ. ಕಾರನ್ನು ಹಿಂಬಾಲಿಸಿ ಪೋಲೋ ಕಾರಿನ ಚಾಲಕ ಮಂಕಾಪುರದ ಸೇತುವೆಯ ಬಳಿ ಆಡಿ ಕಾರನ್ನು ನಿಲ್ಲಿಸಿದ್ದರು. ಸಾಂಕೇತ್ ಸೇರಿದಂತೆ ಮೂವರು ಪರಾರಿಯಾಗಿದ್ದರು.
ಘಟನೆಯ ಕುರಿತು ಚಂದ್ರಶೇಖರ್ ಬವಾಂಕುಲೆ ಸುದ್ದಿಗಾರರೊಂದಿಗೆ ಮಾತನಾಡಿ, ಆಡಿ ಕಾರು ತನ್ನ ಮಗನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಒಪ್ಪಿಕೊಂಡಿದ್ದರು. ಪೊಲೀಸರು ಅಪಘಾತದ ಬಗ್ಗೆ ಯಾವುದೇ ಪಕ್ಷಪಾತ ಮಾಡದೇ ಸದ್ಯ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.