ನಾಗೋರ್ನೊ-ಕರಾಬಖ್: (Nagorno-Karabakh)ಇಲ್ಲಿನ ಇಂಧನ ಡಿಪೋದಲ್ಲಿ ಸಂಭವಿಸಿದ ಸ್ಫೋಟದಿಂದ 20 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿರುವ ದುರಂತ ಘಟನೆ ನಡೆದಿದೆ.
ಖಾನ್ಕೆಂಡಿಯ ಮುಖ್ಯ ನಗರದ ಬಳಿ ಸೋಮವಾರ ಸಂಜೆ ಸ್ಫೋಟ ಸಂಭವಿಸಿದೆ. ಸುಮಾರು 300 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಗುರಿ: ಅಮೆರಿಕದ ಕಂಪನಿಗಳೊಂದಿಗೆ ಎಂ.ಬಿ ಪಾಟೀಲ್ ಮಾತುಕತೆ
ಸ್ಫೋಟದ ಸ್ಥಳದಲ್ಲಿ 13 ಅಪರಿಚಿತ ಶವಗಳು ಪತ್ತೆಯಾಗಿವೆ. ಏಳು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಟ್ಟಗಾಯಗಳಾಗಿರುವ 290 ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಹುಪಾಲು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಾಗೋರ್ನೊ-ಕರಾಬಖ್‌ನ ವೈದ್ಯಕೀಯ ಸಾಮರ್ಥ್ಯಗಳು ಸಾಕಾಗುವುದಿಲ್ಲ ಎಂದು ಮಾನವ ಹಕ್ಕುಗಳ ಓಂಬುಡ್ಸ್‌ಮನ್ ಗೆಗಾಮ್ ಸ್ಟೆಪನ್ಯನ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಯ ಕುತ್ತಿಗೆಗೆ 30 ಬಾರಿ ಚುಚ್ಚಿ, ಕಬ್ಬಿಣದ ಬಾಣಲೆಯಲ್ಲಿ ಹೊಡೆದು ಕೊಂದ ಪಾಪಿ ಮಗಳು!
ಕಳೆದ ವಾರ ಅಜೆರ್ಬೈಜಾನ್ (Azerbaijan) ನಾಗೋರ್ನೊ-ಕರಾಬಖ್ ಅನ್ನು ವಶಪಡಿಸಿಕೊಂಡ ನಂತರ, ಯೆರೆವಾನ್‌ನಲ್ಲಿನ ಅರ್ಮೇನಿಯನ್ ಸರ್ಕಾರವು ಹೋರಾಟದಿಂದ ನಿರಾಶ್ರಿತರಾದವರನ್ನು ಸ್ಥಳಾಂತರಿಸುವ ಯೋಜನೆಗಳನ್ನು ಘೋಷಿಸಿದೆ. ಸಾವಿರಾರು ಜನರು ಈ ಪ್ರದೇಶವನ್ನು ತೊರೆದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]