ಕನ್ನಡ ಕಿರುತೆರೆ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ `ನಾಗಿಣಿ 2′ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾ ಜೊತೆ ಹಸೆಮಣೆ ಏರಿದ್ದರು. ಇದೀಗ ಪತ್ನಿಯ ಜೊತೆ ನಟ ನಿನಾದ್ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟಿವಿ ಪರದೆಯಲ್ಲಿ ನಿನಾದ್ ಮತ್ತು ನಮೃತಾ ಗೌಡ ಲವ್ ಸ್ಟೋರಿ ನೋಡಿ ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ, ತನ್ನ ನಿಜ ಜೀವನದ ಸಂಗಾತಿಯನ್ನು ಪರಿಚಯಿಸಿದ್ದಾರೆ. ತಮ್ಮ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿರುವ ರಮ್ಯಾ ಜೊತೆ ಫ್ರೆಂಡ್‌ಶಿಪ್ ನಂತರ ಪ್ರೇಮಾಂಕುರವಾಗಿ ಇದೀಗ ಸತಿ ಪತಿಗಳಾಗಿ ಜೀವನ ನಡೆಸುತ್ತಿದ್ದಾರೆ.
ನಿನಾದ್ ಮತ್ತು ರಮ್ಯಾ ಈ ವರ್ಷ ಫೆಬ್ರವರಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರದ ಪ್ರಕಾರ ನಿಶ್ಚತಾರ್ಥವಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಆರತಕ್ಷತೆ ಕೂಡ ಅದ್ದೂರಿಯಾಗಿ ನೆರವೇರಿತ್ತು. ಇದೀಗ ನಟ ನಿನಾದ್ ಪತ್ನಿ ರಮ್ಯಾ ಜೊತೆ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಇನ್ನು ನವ ಜೋಡಿಗೆ ಅಭಿಮಾನಿಗಳು, ಆಪ್ತರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.