ಬಳ್ಳಾರಿ: ಶತಾಯಗತಾಯ ಹೇಗಾದ್ರೂ ಮಾಡಿ ಮುಖ್ಯಮಂತ್ರಿ ಪಟ್ಟಕ್ಕೆ ಏರಲೇಬೇಕು ಅಂತ ಪಟ್ಟು ಹಿಡಿದು, ಸುಮಾರು 8 ಬಾರಿ ಆಪರೇಷನ್ ಕಮಲ ಮಾಡುವ ಮೂಲಕ ಬಿಎಸ್‍ವೈ ಸಿಎಂ ಆಗಿಯೇ ಬಿಟ್ಟರು. 17 ಜನ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಮೊದಲ ಹಂತದ ಆಪರೇಷನ್ ಕಮಲ ಮಾಡಿದ್ರು. ಆದರೆ ರಾಜೀನಾಮೆ ಕೊಟ್ಟು ಮತ್ತೊಂದು ಚುನಾವಣೆ ಈಗ ಆರಂಭ ಆಗಿದೆ. ಒಂದು ವೇಳೆ ಉಪ ಚುನಾವಣೆಯಲ್ಲಿ ಸೋತರೆ ಈ ರಾಜ್ಯದ ಜನತೆ ಮತ್ತೊಂದು ಆಪರೇಷನ್ ಕಮಲ ನೋಡುವುದು ಪಕ್ಕಾ ಆಗಿದೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರವಷ್ಟೇ ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದರು. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೈ ಶಾಸಕ ಬಿ ನಾಗೇಂದ್ರ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕೈ ಪಕ್ಷದಿಂದ ಬೇಕಂತಲೇ ಅಂತರ ಕಾಯ್ದುಕೊಳ್ತಿದ್ದಾರೆ. ತಮಗೂ ಚುನಾವಣೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಾಗೇಂದ್ರ ಅವರ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
Advertisement
Advertisement
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯುತ್ತಾ, ಉಪ ಫಲಿತಾಂಶದ ಮೇಲೆ ಆಪರೇಷನ್ ನಿಂತಿದ್ಯಾ, ಅಥವಾ ಒಳಗೊಳಗೆ ಆಪರೇಷನ್ ಕಮಲ ತಯಾರಿ ನಡೆದಿದ್ಯಾ ಎಂಬ ಪ್ರಶ್ನೆಗಳು ನಾಗೇಂದ್ರ ಅವ್ರ ನಡವಳಿಕೆಯಿಂದ ಉದ್ಭವಿಸುತ್ತವೆ. ಸಿಎಂ ಏನೋ ಬಂದಲ್ಲಿ ಹೋದಲ್ಲಿ 15ಕ್ಕೆ 15 ಸೀಟ್ ಗೆಲ್ಲೋದು ಪಕ್ಕಾ ಅಂತಿದ್ದಾರೆ. ಆದರೂ ಬಿಜೆಪಿ ನಾಯಕರಿಗೆ ಒಳಗೊಳಗೆ ಒಂಥರಾ ಭಯ ಆರಂಭವಾಗಿದೆ. ಒಂದು ವೇಳೆ ಸರ್ಕಾರಕ್ಕೆ ಅಗತ್ಯವಿರುವ ಸ್ಥಾನಗಳನ್ನು ಗೆಲ್ಲಲು ಆಗದಿದ್ದರೆ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಸ್ಕೆಚ್ ಹಾಕಿದ್ದಾರೆ. ಬಿಜೆಪಿಗೆ ಜಿಗಿಯಲು ನಾಗೇಂದ್ರ ಕೂಡ ರೆಡಿ ಆಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.