ನಾಗಭೂಷಣ್ ಕಾರು ಅಪಘಾತ: ಕುಡಿದಿರಲಿಲ್ಲ, ಸ್ಟೇಶನ್ ಬೇಲ್ ನೀಡಲಾಗಿದೆ- ಡಿಸಿಪಿ ಪ್ರತಿಕ್ರಿಯೆ

Public TV
1 Min Read
nagabhushan 2

ನಿನ್ನೆ ರಾತ್ರಿ ನಟ ನಾಗಭೂಷಣ್ (Nagabhushan) ಕಾರು ಅಪಘಾತದಲ್ಲಿ (Accident) ಮಹಿಳೆಯೋರ್ವರು ಸಾವಿಗೀಡಾಗಿದ್ದು ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ನಟ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಎಲ್ಲ ಬೆಳವಣಿಗೆ ಕುರಿತಂತೆ ಸಂಚಾರ ದಕ್ಷಿಣ ಡಿಸಿಪಿ ಶಿವಪ್ರಕಾಶ್ ದೇವರಾಜ್ (Shivaprakash Devaraj) ಪ್ರತಿಕ್ರಿಯೆ ನೀಡಿದ್ದಾರೆ.

Car

ಶನಿವಾರ ರಾತ್ರಿ 9-30 ಕ್ಕೆ ಅಪಘಾತವಾಗಿದೆ. ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಡೆದ ಈ ಘಟನೆಯಲ್ಲಿ ಪಾದಾಚಾರಿಗಳಾದ ಕೃಷ್ಣ ಮತ್ತು ಪ್ರೇಮಾ (Prema) ಎಂಬುವರಿಗೆ ಅಪಘಾತವಾಗಿತ್ತು. ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಆಕ್ಸಿಡೆಂಟ್ ನಂತರ ಸ್ಪಾಟ್ ನಲ್ಲೇ ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ನಟನಾಗಿದ್ದು ಅರೆಸ್ಟ್ ಮಾಡಲಾಗಿದೆ. ಮುಂದಿನ ಪ್ರೊಸೀಜರ್ ನಡೆಸಲಾಗ್ತಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

nagabhushan

ನಾಗಭೂಷಣ್ ಅವರನ್ನು ಈಗ ಸ್ಟೇಷನ್ ಬೇಲ್ ನೀಡಿ ಕಳಿಸಲಾಗಿದ್ದು, ಮುಂದಿನ ವಿಚಾರಣೆಗೆ ಮತ್ತೆ ಕರೆಯಲಾಗುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಅತಿ ವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದ್ದು, ಆತ ಚಾಲನೆ ಮಾಡುವಾಗ ಕುಡಿದಿಲ್ಲ ಎಂದು ಗೊತ್ತಾಗಿದೆ. ರಾತ್ರಿಯೇ ಆಲ್ಕೊ ಹಾಲ್ ಟೆಸ್ಟಿಂಗ್ ಮೀಟರ್ ನಲ್ಲಿ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ.

ಬ್ಲಡ್ ತೆಗೆದು ಟೆಸ್ಟಿಂಗ್ ಕೂಡ ಕಳುಹಿಸಲಾಗಿತ್ತು. ಆ ವರದಿಯಲ್ಲೂ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ. ಆಕ್ಸಿಡೆಂಟ್ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ ಎಂದು ಸಂಚಾರ ದಕ್ಷಿಣ ಡಿಸಿಪಿ ಶಿವಪಕ್ರಾಶ್ ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article