ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮನೆಗೆ ತೆರಳಿ ಆಶೀರ್ವದಿಸಿದ್ದ ನಾಗಸಾಧುಗಳು ಈಗ ರಾಯಚೂರು ಗ್ರಾಮೀಣ ಶಾಸಕರ ಮನೆಯಲ್ಲೂ ಏಕಾಏಕಿ ಪ್ರತ್ಯಕ್ಷವಾಗಿ ಆಶೀರ್ವದಿಸಿದ್ದಾರೆ.
ಶಾಸಕ ತಿಪ್ಪರಾಜು ಹವಾಲ್ದಾರ್ ಮನೆಗೆ ಕಾರಿನಲ್ಲಿ ಬಂದ ಮೂವರು ನಾಗಸಾಧುಗಳು ನೇರವಾಗಿ ಮನೆಯೊಳಗೆ ಬಂದು ಆಶೀರ್ವದಿಸಿದ್ದಾರೆ. ಮುಂದೆ ಮಂತ್ರಿಯಾಗಿ ಕೆಂಪು ಕಾರಿನಲ್ಲಿ ನಮ್ಮನ್ನು ನೋಡಲು ಬಾ ಎಂದು ಆಶೀರ್ವದಿಸಿದರು ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ನಾಗಸಾಧುಗಳು, ಗುರುವಾರ ಶಾಸಕರ ಮನೆಗೆ ನೇರವಾಗಿ ತಾವೇ ತೆರಳಿದ್ದಾರೆ. ನಾಗಸಾಧುಗಳಿಗೆ 5 ಸಾವಿರ ರೂಪಾಯಿ ಕಾಣಿಕೆ ನೀಡಿ ಶಾಸಕ ತಿಪ್ಪರಾಜು ಆಶೀರ್ವಾದ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಶಾಸಕ ಸಿಟಿ ರವಿ ಅವರ ಮನೆಗೂ ನಾಗಸಾಧುಗಳು ಭೇಟಿ ನೀಡಿದ್ದರು. ಈ ಬಗ್ಗೆ ಸ್ವತಃ ಸಿಟಿ ರವಿ ಟ್ವಿಟ್ಟರ್‍ನಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದರು.