ಹೈದರಾಬಾದ್: ಟಾಲಿವುಡ್ ನಟ, ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೆಷನ್ (ಟಿಬಿಎ)ನ ಉಪಾಧ್ಯಕ್ಷರಾಗಿರುವ ನಾಗಾರ್ಜುನ ಅವರು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಬಿಎಂಡಬ್ಲೂ ಎಕ್ಸ್5 ಲಕ್ಸುರಿ ಕಾರನ್ನು ಗಿಫ್ಟ್ ನೀಡಿದ್ದಾರೆ.
ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಪಿವಿ ಸಿಂಧುರನ್ನು ಭೇಟಿ ಮಾಡಿದ ನಾಗಾರ್ಜುನ, ಕೋಚ್ ಪುಲ್ಲೇಲ ಗೋಪಿಚಂದ್ ಅವರ ಸಮ್ಮುಖದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯನ್ನು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೆಷನ್ ಮಾಜಿ ಅಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ನೀಡಿದ್ದು, ಇದು ಪಿವಿ ಸಿಂಧು ಅವರಿಗೆ ಅವರು ನೀಡುತ್ತಿರುವ 4ನೇ ಕಾರು ಎಂಬುವುದು ವಿಶೇಷ. ಸಿಂಧುಗೆ ಮಾತ್ರವಲ್ಲೇ ಚಾಮುಂಡೇಶ್ವರಿನಾಥ್ ಈವರೆಗೆ ಭಾರತದ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ 22 ಕಾರುಗಳನ್ನು ಗಿಫ್ಟ್ ನೀಡಿದ್ದಾರೆ. ಈ ಹಿಂದೆ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಲಕ್ಸುರಿ ಕಾರನ್ನು ಸಿಂಧುಗೆ ಗಿಫ್ಟ್ ನೀಡಿದ್ದರು.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ನಟ ನಾಗಾರ್ಜುನ ಸಿಂಧು ಸಾಧನೆಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಕೋಚ್ ಗೋಪಿಚಂದ್ ಅವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಇಂತಹ ಉತ್ತಮ ಕ್ರೀಡಾಪಟುವನ್ನು ನೀಡಿದಕ್ಕೆ ಧನ್ಯವಾದ. ಇಂತಹ ಮತ್ತಷ್ಟು ಕ್ರೀಡಾಪಟುಗಳನ್ನು ದೇಶಕ್ಕಾಗಿ ನೀಡಬೇಡಿಕೆ ಎಂದು ಮನವಿ ಮಾಡಿದರು.
Advertisement
ಸಿಂಧು ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಜಪಾನ್‍ನ ನೊಜೊಮಿ ಒಕುಹರಾ ವಿರುದ್ಧ 21-7, 21-7 ಸೆಟ್ ಗಳಿಂದ ಗೆಲ್ಲುವ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದರು.
Advertisement
ಚಿನ್ನದ ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ತೆಲುಗು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸಿಂಧುಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಸಿಂಧು ಆಂಧ್ರಪ್ರದೇಶ ಸಿಎಂ ಜಗನ್‍ಮೋಹನ್ ರೆಡ್ಡಿ ಅವರು ಭೇಟಿ ಮಾಡಿದ್ದರು.