ಇಂದು ನಾಗರಪಂಚಮಿ (Nagarapanchami). ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಾಗ ದೇವನಿಗೆ ಹಾಲೆರೆಯುವ ಮೂಲಕ ನಾಡಿನಾದ್ಯಂತ ಸುಖ-ಸಮೃದ್ಧಿಯನ್ನು ಬೆಳಗಿಸಿಕೊಡುವಂತೆ ಪ್ರಾರ್ಥಿಸಲಾಗುತ್ತಿದೆ. ಅಂತೆಯೇ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯುತ್ತಾರೆ. ಹಾಗಾದ್ರೆ ನಾಗರಪಂಚಮಿಗೂ ಹೆಣ್ಣು ಮಕ್ಕಳಿಗೂ ಇರುವ ಸಂಬಂಧವೇನು..? ಈ ಹಬ್ಬ ಅಣ್ಣ-ತಂಗಿಯರಿಗೆ ಯಾಕೆ ವಿಶೇಷ ಎಂಬುದನ್ನು ಮುಂದೆ ಓದಿ..
Advertisement
ಸ್ಕಂದ ಪುರಾಣದಲ್ಲಿ ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳುತ್ತಾನೆ. ಆಗ ಆತ ಒಂದು ಕಥೆಯನ್ನು ಹೇಳುತ್ತಾನೆ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?
Advertisement
Advertisement
ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ ಓರ್ವ ಹೆಣ್ಣು ಹಾಗೂ 8 ಮಂದಿ ಗಂಡು ಮಕ್ಕಳಿದ್ದರು. ಒಂದು ದಿನ ಗರುಡನಿಂದ ಹೆದರಿದ್ದ ನಾಗರವೊಂದು ಈ ಹೆಣ್ಣುಮಗಳ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಕೂಡಲೇ ಈಕೆ ಭಕ್ತಿಯಿಂದ ನಾಗನಿಗೆ ಹಾಲು, ಫಲವಸ್ತುಗಳನ್ನು ಇಟ್ಟು ಸಾಕುತ್ತಾಳೆ. ಹೀಗೆ ಸಾಕಿ-ಸಲಹಿದ ಹೆಣ್ಣು ಮಗಳಿಗೆ ನಾಗನು ಪ್ರತಿದಿನ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರುವಾಗ ಒಂದು ದಿನ 8 ಮಂದಿ ಗಂಡು ಮಕ್ಕಳಲ್ಲಿ ಓರ್ವ ನನಗೆ ಚಿನ್ನ ಬೇಕು ಎಂದು ನಾಗರಾಜನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ.
Advertisement
ಇದರಿಂದ ಕೋಪಗೊಂಡ ನಾಗಪ್ಪ, ಈತನ ಜೊತೆ ಉಳಿದ 7 ಮಂದಿಯನ್ನೂ ಕೊಂದು ಹೊರಟು ಹೋಗುತ್ತದೆ. ಇತ್ತ ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣವೆಂದು ಆಕೆ ದೇವರ ಎದುರಿನಲ್ಲಿಯೇ ಶಿರಚ್ಛೇದನಕ್ಕೆ ಮುಂದಾಗುತ್ತಾಳೆ. ಈ ವೇಳೆ ನಾರಾಯಣ ದೇವ ಪ್ರತ್ಯಕ್ಷವಾಗಿ ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಈ ದಿನವನ್ನೇ ಇಂದು ನಾವು ನಾಗರ ಪಂಚಮಿ ಹಬ್ಬವಾಗಿ ಆಚರಿಸುತ್ತೇವೆ. ಈ ಹಿನ್ನೆಲೆಯಿಂದಾಗಿ ನಾಗರಪಂಚಮಿ ಹೆಣ್ಣುಮಕ್ಕಳಿಗೆ ವಿಶೇಷವೂ ಆಗಿದೆ. ಇದನ್ನೂ ಓದಿ: Nagara Panchami: ಕರ್ನಾಟಕದ 10 ಪುಣ್ಯ ನಾಗಕ್ಷೇತ್ರ
ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ ಬರಲಿಲ್ಲಾ ಕರಿಯಾಕ ಅಂತ ಜಾನಪದ ಗೀತೆಯಿದೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳ ಹೆಬ್ಬಾಗಿಲಾಗಿರುವ ಶ್ರಾವಣ ಮಾಸದಲ್ಲಿ ಆಚರಿಸುವ ಬಹು ದೊಡ್ಡ ಹಬ್ಬ ಇದು. ಈ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.
Web Stories