ಶಿವಮೊಗ್ಗ: ಮಲೆನಾಡಿನಲ್ಲಿ ವ್ಯಾಪಕವಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇಂಥ ಹೊತ್ತಿನಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ನಾಗರಾಜಗೌಡ ಅವರು ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ನಿವಾಸಿ ಕುಳ್ಳುಂಡೆ ನಾಗರಾಜಗೌಡ, ತಮ್ಮೂರಿನ ಸರ್ಕಾರಿ ಶಾಲೆಗೆ ಸಂಪೂರ್ಣ ಹೊಸ ರೂಪ ನೀಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ಕೊಟ್ರಪ್ಪ ಹಿರೇಮಾಗಡಿ ಅವರ ಜೊತೆಗೂಡಿ ಶಾಲೆಗೆ ಸುಸಜ್ಜಿತ ಮೈದಾನ ಕಲ್ಪಿಸಿದ್ದಾರೆ. ಜೊತೆಗೆ ಶಾಲೆ ಸುತ್ತಮುತ್ತ ಸುಮಾರು 40 ಬಗೆಯ ಐನೂರಕ್ಕೂ ಹೆಚ್ಚು ಸಸಿ ಹಾಕಿ ಬೆಳೆಸುತ್ತಿದ್ದಾರೆ. ಈ ಗಿಡಗಳಿಗೆ ಡ್ರಿಪ್, ಪ್ಲಿಂಕ್ಲರ್ ವ್ಯವಸ್ಥೆ ಮಾಡಿದ್ದಾರೆ. ನಾಗರಾಜಗೌಡ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೇ ಇಲ್ಲಿಗೂ ಕಳಿಸೊ ಪೋಷಣೆ ಮಾಡಿಸ್ತಿದ್ದಾರೆ.
Advertisement
Advertisement
ಓಮ್ನಿಯಲ್ಲಿ ಸದಾ ಗುದ್ದಲಿ, ಹಾರೇ, ಪಿಕಾಸಿ ಇನ್ನಿತರ ಸಲಕರಣೆ ಜೊತೆ ಸಾಗುವ ನಾಗರಾಜ ಗೌಡರು ಯಾವುದೇ ಶಾಲೆ ಕಂಡರೆ ಅಲ್ಲಿ ಗಿಡ ನೆಡುತ್ತಾರೆ. ಹೀಗಾಗಿ, ಅಳಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡಗದ್ದೆ ಸಮುದಾಯ ಆರೋಗ್ಯ ಕೇಂದ್ರ, ಇರುವತ್ತಿಯ ಅಂಗನವಾಡಿ ಕೇಂದ್ರವನ್ನು ಪರಿಸರ ಸ್ನೇಹಿಯಾಗಿಸಿದ್ದಾರೆ. ಬೇಲಿ ಕಿತ್ತೋಗಿದ್ದರೆ ಅದನ್ನು ತಾವೇ ಸರಿ ಮಾಡ್ತಾರೆ.
Advertisement
ಕೃಷಿಕರಾಗಿರೋ ಇವರು ಹತ್ತು ವರ್ಷಗಳಿಂದ ಈ ಕಾರ್ಯ ಮಾಡ್ತಿದ್ದಾರೆ. ಸುಮಾರು 10-12 ಲಕ್ಷ ರೂಪಾಯಿ ಖರ್ಚಾಗಿದೆ. ಆದರೂ ಪರವಾಗಿಲ್ಲ. ಹಣಕ್ಕಿಂತ ಶಾಲಾ ವಾತಾವರಣ ಸುಂದರವಾಗಿದ್ದರೆ ಮಕ್ಕಳೂ ಲವಲವಿಕೆಯಿಂದ ಇರುತ್ತಾರೆ. ಉತ್ತಮ ವ್ಯಕ್ತಿತ್ವ, ಸಮಾಜ ರೂಪಿಸಬಹುದು ಅಂತಾ ನಾಗರಾಜಗೌಡ ಹೇಳುತ್ತಾರೆ.
Advertisement
https://www.youtube.com/watch?v=fGovXUIHEEE