– ದಾಖಲೆ ಇವೆ ಎಂದು ಸವಾಲು ಹಾಕಿದ ಪರಿಷತ್ ಸದಸ್ಯ
ಬೆಳಗಾವಿ: ನೇಮಕಾತಿ ಅಕ್ರಮದ (Recruitment Irregularities) ಬಗ್ಗೆ ನನ್ನ ಬಳಿ ದಾಖಲೆ ಇವೆ, ದಾಖಲೆ ಸದನದ ಮುಂದೆ ಇಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿಗೆ (Basavaraj Horatti) ಪರಿಷತ್ ಸದಸ್ಯ ನಾಗರಾಜ್ ಯಾದವ್ (Nagaraj Yadav) ಸವಾಲು ಹಾಕಿದ್ದಾರೆ.
ಸುವರ್ಣಸೌಧದಲ್ಲಿ ‘ಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ಯಾರಿಗೆ ಹೇಡಿ ಅಂತಾರೆ. ಮೊದಲು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಿ. ಅವರು ಬಿಜೆಪಿ ಸಭಾಪತಿ, ನಮಗ್ಯಾಕೆ ಮುಲಾಜು. ಸಿಎಂ, ಡಿಸಿಎಂ ಗಮನಕ್ಕೂ ತರುತ್ತೇನೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಹೈಕಮಾಂಡ್ ಅನುಮತಿ ಕೊಟ್ಟರೆ ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸದ್ಯ ಪ್ರಸಾದ್ ಯೋಜನೆಯಡಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಪರಿಗಣನೆಯಲ್ಲಿಲ್ಲ: ಕೇಂದ್ರ
ಅವರು ಹೇಡಿ ಅಲ್ಲ ಎನ್ನುವುದಾದರೆ ನನಗೆ ಚರ್ಚೆಗೆ ಅವಕಾಶ ಕೊಡಿ. ಯಾರು ಹೇಡಿ? ಯಾರು ಹೇಡಿ ಅಲ್ಲ ಗೊತ್ತಾಗಲಿ. ತನಿಖೆಗೆ ಕೊಡಲಿ. ಸಮಯ ನಿಗದಿ ಮಾಡಲಿ. 15 ಸಿಎಂಗಳ ಜೊತೆ ಕೆಲಸ ಮಾಡಿದ್ದೀನಿ ಅನ್ನೋದಲ್ಲ. ಎಷ್ಟು ಸಿಎಂಗಳ ಜೊತೆಯಲ್ಲಾದರೂ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಇಂಡಿಗೋ ಸಮಸ್ಯೆ – 9,55,591 ಟಿಕೆಟ್ ರದ್ದು, 827 ಕೋಟಿ ರೂ. ರೀ ಫಂಡ್

