ಬೆಂಗಳೂರು: ಮುಂಬರುವ ವಿಧಾನಸಭೆ ಚುನಾಚಣೆಗೆ ಕ್ವಾರ್ಟರ್ ಫೈನಲ್ ಎಂದೇ ಪರಿಗಣಿಸಲ್ಪಟ್ಟಿದ್ದ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ, 57 ಗ್ರಾಮಪಂಚಾಯ್ತಿಗಳ ಎಲೆಕ್ಷನ್ ಫಲಿತಾಂಶ ಇಂದು ಪ್ರಕಟವಾಗಿದೆ.
ಸೋಮವಾರ ನಡೆದಿದ್ದ ಚುನಾವಣೆಯನ್ನು ಶೀಘ್ರವೇ ನಡೆಯಲಿರುವ ಜಿ.ಪಂ, ತಾ.ಪಂ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿತ್ತು. ಇಂದು ಫಲಿತಾಂಶ ಹೊರಬಿದ್ದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆ ಆಗಿದೆ. ವಿರೋಧ ಪಕ್ಷ ಕಾಂಗ್ರೆಸ್ ಈ ಚುನಾವಣೆಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಜೆಡಿಎಸ್ ಪಕ್ಷವಂತೂ ಕೇವಲ ಒಂದು ಸ್ಥಾನಕ್ಕೆ ಕುಸಿದಿದೆ. ಘಟಾನುಘಟಿ ನಾಯಕರ ಕ್ಷೇತ್ರಗಳಲ್ಲಿ ಅವರದ್ದೇ ಪಕ್ಷಕ್ಕೆ ತೀವ್ರ ಹಿನ್ನೆಡೆ ಆಗಿದೆ. ಇದೊಂಥರಾ ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದರೂ ತಪ್ಪಾಗಲ್ಲ.
Advertisement
Advertisement
ಫಲಿತಾಂಶ ಚಿತ್ರಣ:
* 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯ್ತಿಗಳಿಗೆ ಮತದಾನ
* 58 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1161 ವಾರ್ಡ್‍ಗಳಿಗೆ ಎಲೆಕ್ಷನ್
* ಬಿಜೆಪಿ – 421 ವಾರ್ಡ್‍ಗಳಲ್ಲಿ ಗೆಲುವು, 16 ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು
* ಕಾಂಗ್ರೆಸ್ – 832 ವಾರ್ಡ್‍ಗಳಲ್ಲಿ ಗೆಲುವು, 24 ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು
* ಜೆಡಿಎಸ್ – 45 ವಾರ್ಡ್‍ಗಳಲ್ಲಿ ಗೆಲುವು, 1 ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು
* ಇತರರು – 193 ವಾರ್ಡ್‍ಗಳಲ್ಲಿ ಗೆಲುವು, 5 ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು
* 11 ಸ್ಥಳೀಯ ಸಂಸ್ಥೆಗಳು ಅತಂತ್ರ
Advertisement
Advertisement
ಅವಧಿ ಪೂರ್ಣಗೊಂಡಿದ್ದ ಐದು ನಗರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಮೇಲುಗೈ ಸಾಧಿಸಿದೆ. ಐದರಲ್ಲಿ ಮೂರು ನಗರಸಭೆಗಳಲ್ಲಿ ಕಮಲ ಅರಳುವುದು ಖಚಿತವಾಗಿದೆ. ಎರಡು ನಗರಸಭೆಗಳಲ್ಲಿ ಅತಂತ್ರವಾಗಿದ್ದು, ಹೊಸಪೇಟೆಯಲ್ಲಿ ಸಚಿವ ಆನಂದ್‍ಸಿಂಗ್ ಬೆಂಬಲಿಗರು ಪಕ್ಷೇತರವಾಗಿ ನಿಂತು ಗೆದ್ದಿದ್ದು, ಬಿಜೆಪಿಗೆ ಬೆಂಬಲಿಸಿದ್ರೆ ಅಧಿಕಾರ ಖಚಿತವಾಗಿದೆ. ಕಾಂಗ್ರೆಸ್ ನಗರಸಭೆ ಕೈತಪ್ಪಿದ್ರೂ ಕೂಡ, ಸ್ಥಾನ ಗಳಿಕೆಯಲ್ಲಿ ಬಿಜೆಪಿಗೆ ಟಫ್ ಫೈಟ್ ನೀಡಿದೆ.
ನಗರಸಭೆ ಫಲಿತಾಂಶ
* 5 ನಗರಸಭೆ – ಒಟ್ಟು 166 ವಾರ್ಡ್
* ಬಿಜೆಪಿ 66, ಕಾಂಗ್ರೆಸ್ 62, ಜೆಡಿಎಸ್ 12, ಇತರರು 26
ಗದಗ-ಬೆಟಗೇರಿ ನಗರಸಭೆ ಫಲಿತಾಂಶ
* ಬಿಜೆಪಿಗೆ ಸರಳ ಬಹುಮತ, ಕಾಂಗ್ರೆಸ್‍ಗೆ ಅಧಿಕಾರ ನಷ್ಟ
* ಒಟ್ಟು 35 ವಾರ್ಡ್, ಬಿಜೆಪಿ 18, ಕಾಂಗ್ರೆಸ್ 15, ಇತರೆ 2 (10 ವರ್ಷಗಳ ಬಳಿಕ ಬೆಟಗೇರಿಯಲ್ಲಿ ಬಿಜೆಪಿಗೆ ಅಧಿಕಾರ)
ಚಿಕ್ಕಮಗಳೂರು ನಗರಸಭೆ ಫಲಿತಾಂಶ
ಒಟ್ಟು ವಾರ್ಡ್: 35 – ಬಿಜೆಪಿಗೆ ಸರಳ ಬಹುಮತ
* ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 02, ಇತರೆ 02, ಎಸ್‍ಡಿಪಿಐ 01 ಇದನ್ನೂ ಓದಿ: ಜೊಲ್ಲೆ ದಂಪತಿ ವಿರುದ್ಧ ಹರಿಹಾಯ್ದ ಪ್ರಕಾಶ್ ಹುಕ್ಕೇರಿ
ಶಿರಾ ನಗರಸಭೆ ಫಲಿತಾಂಶ
* ಒಟ್ಟು ವಾರ್ಡ್: 30 – ಅತಂತ್ರ ಫಲಿತಾಂಶ
* ಕಾಂಗ್ರೆಸ್ 11, ಬಿಜೆಪಿ 04, ಜೆಡಿಎಸ್ 07, ಇತರೆ 08
ಹೊಸಪೇಟೆ ನಗರಸಭೆ ಫಲಿತಾಂಶ
* ಒಟ್ಟು ವಾರ್ಡ್: 35 – ಅತಂತ್ರ ಫಲಿತಾಂಶ
* ಬಿಜೆಪಿ 10, ಕಾಂಗ್ರೆಸ್ 12, ಪಕ್ಷೇತರರು 12, ಎಎಪಿ 01
* ಪಕ್ಷೇತರರ ಪೈಕಿ ಬಹುತೇಕರು ಸಚಿವ ಆನಂದ್ ಸಿಂಗ್ ಬೆಂಬಲಿಗರು
ಹೆಬ್ಬಗೋಡಿ ನಗರಸಭೆ ಫಲಿತಾಂಶ
ಒಟ್ಟು ವಾರ್ಡ್ 31 – ಬಿಜೆಪಿಗೆ ಸರಳ ಬಹುಮತ
* ಕಾಂಗ್ರೆಸ್ 12, ಬಿಜೆಪಿ 16, ಜೆಡಿಎಸ್ 03 (ಬಿಜೆಪಿಗೆ 3ನೇ ಬಾರಿಗೆ ಅಧಿಕಾರ)