ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ. ನಾಗರ ಪಂಚಮಿಯಂದು ದೇವರ ನೈವೇದ್ಯಕ್ಕೆ ಒಂದೊಂದು ಕಡೆಗಳಲ್ಲಿ ಒಂದೊಂದು ಬಗೆಯ ಸಿಹಿ ತಿನಿಸು ಮಾಡುತ್ತಾರೆ. ನಮ್ಮ ರಾಜ್ಯದ ಯಾವೆಲ್ಲಾ ಭಾಗಗಳಲ್ಲಿ ಈ ಹಬ್ಬಕ್ಕೆ ಏನೆಲ್ಲಾ ಸಿಹಿ ತಿನಿಸನ್ನು ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ.
Advertisement
ಅರಿಶಿನದೆಲೆ ಕಡುಬು: ನಾಗ ದೇವರ ನೈವೇದ್ಯಕ್ಕೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಸಿಹಿ ತಿನಿಸೆಂದರೆ ಅದು ಅರಿಶಿನ ಎಲೆ ಕಡುಬು. ಅರಿಶಿನ ಎಲೆಗಳಲ್ಲಿ ಸುತ್ತಿ ತಯಾರಿಸುವ ಈ ಸಿಹಿ ತಿಂಡಿಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸಿಹಿ ಅರಿಶಿನ ಎಲೆಯ ಘಮದೊಂದಿಗೆ ಬೆರೆತಿರುತ್ತದೆ. ಇದರ ರುಚಿಯು ಅಷ್ಟೇ ಅದ್ಭುತವಾಗಿರುತ್ತದೆ. ತುಳು ಭಾಷೆಯಲ್ಲಿ ಅರಿಶಿನ ಎಲೆ ಪತೋಳಿ ಅಥವಾ ಅರಿಶಿನ ಎಲೆ ಕಡುಬಿಗೆ ಈರಡ್ಯೆ ಎಂದು ಕರೆಯುತ್ತಾರೆ.
Advertisement
Advertisement
ಶೇಂಗಾ ಉಂಡೆ: ನಾಗರ ಪಂಚಮಿ ಹಬ್ಬಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಶೇಂಗಾದ ಉಂಡೆ ತಯಾರಿಸಲಾಗುತ್ತದೆ. ಈ ಸಿಹಿ ತಿನಿಸು ಬಹಳ ರುಚಿಕರವಾಗಿರುತ್ತದೆ. ಬೆಲ್ಲ, ತೆಂಗಿನ ತುರಿ ಹಾಗೂ ಶೇಂಗಾದಿಂದ ಇದನ್ನು ತಯಾರಿಸಲಾಗುತ್ತದೆ. ದೇವರಿಗೆ ನೈವೇದ್ಯವಾದ ಬಳಿಕ ಈ ಸಿಹಿಯನ್ನು ಹಂಚಲಾಗುತ್ತದೆ.
Advertisement
ತಂಬಿಟ್ಟು: ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಅಕ್ಕಿ ತಂಬಿಟ್ಟು ನಾಗರ ಪಂಚಮಿಗೆ ವಿಶೇಷವಾಗಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಅಕ್ಕಿ, ಹುರಿಗಡಲೆ, ತೆಂಗಿನ ತುರಿ, ಬೆಲ್ಲ ಹಾಗೂ ಏಲಕ್ಕಿ ಬಳಸಲಾಗುತ್ತದೆ.
ಅಳ್ಳಿಟ್ಟು: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಪ್ರಮುಖ ಸಿಹಿ ತಿನಿಸು. ಇದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಭಾಗದಲ್ಲಿ ಅಳ್ಳಿಟ್ಟು ಇಲ್ಲದೇ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯು ಸಂಪೂರ್ಣವಾಗುವುದೇ ಇಲ್ಲ. ಜೋಳದ ಅರಳು, ಗೋಧಿ ಹಿಟ್ಟು, ಬೆಲ್ಲ, ಅಕ್ಕಿ, ಗಸಗಸೆ, ಏಲಕ್ಕಿ, ಲವಂಗ ಹಾಗೂ ಜಾಯಿಕಾಯಿಯಿಂದ ಇದನ್ನು ತಯಾರಿಸಲಾಗುತ್ತದೆ.
ಭಕ್ತರು ನಾಗದೇವರನ್ನು ಭಕ್ತಿಯಿಂದ ಆರಾಧಿಸಿ, ಈ ಎಲ್ಲಾ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ಸುಖ, ಶಾಂತಿ ಹಾಗೂ ನೆಮ್ಮದಿಗಾಗಿ ನಾಗ ದೇವರನ್ನು ಬೇಡುತ್ತಾರೆ. ಭಕ್ತಿಯಿಂದ ಪೂಜಿಸಿ ನೈವೇದ್ಯ ಅರ್ಪಿಸುವ ಭಕ್ತರಿಗೆ ನಾಗದೇವರು ಸಂತಾನ ಫಲ, ಆನಾರೋಗ್ಯ ಸಮಸ್ಯೆ, ಇನ್ನಿತರ ತೊಂದರೆಗಳನ್ನು ನಾಗದೇವರು ನಿವಾರಿಸುತ್ತಾರೆ ಎಂಬ ನಂಬಿಕೆ ಜನರಲ್ಲಿದೆ.