ಬೆಂಗಳೂರು: ಇಂದು ನಾಗರ ಪಂಚಮಿ (Nagara Panchami) ಹಬ್ಬದ ಸಂಭ್ರಮದ ನಡುವೆ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಏರಿಕೆಯಾಗಿದೆ. ಕಳೆದ ವಾರ 100 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಇಂದು 140-150 ರೂ.ಗೆ ಮಾರಾಟವಾಗುತ್ತಿದೆ. ಜನರು ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.
Advertisement
ಮಾರುಕಟ್ಟೆ ದರ ಹೇಗಿದೆ?
ತೆಂಗಿನಕಾಯಿ ಒಂದಕ್ಕೆ – ದೊಡ್ಡದು 40,
ಸಣ್ಣದು 25-30 ರೂ.
ಅನನಾಸು – ಕಳೆದ ವಾರ 32, ಇಂದು 65 ರೂ.
ನುಗ್ಗೆಕಾಯಿ – ಕಳೆದ ವಾರ 40, ಇಂದು 60ರೂ.
ಬಾಳೆಕಾಯಿ – ಕಳೆದ ವಾರ 8-10 ರೂ. ಈ ವಾರ 15 ರೂ.
Advertisement
Advertisement
ಸಿಹಿ ಕುಂಬಳಕಾಯಿ – ಕಳೆದ ವಾರ ಕೆಜಿಗೆ 20ರೂ. ಈ ವಾರ 40 ರೂ.
ಬಿಳಿ ಕುಂಬಳಕಾಯಿ – 30ರೂ. ಕೆಜಿಗೆ ಇದ್ದಿದ್ದು ಈಗ 40 ರೂ.
ಸೇಬು – ಕಳೆದ ವಾರ 180-200 ರೂ. ಈಗ 250 ರೂ.
ದಾಳಿಂಬೆ – ಕಳೆದ ವಾರ 150 ರೂ., ಈಗ 200 ರೂ.
ಕಪ್ಪು ದ್ರಾಕ್ಷಿ – ಕಳೆದ ವಾರ 100-110 ರೂ., ಈಗ 160 ರೂ. ಇದನ್ನೂ ಓದಿ: ಕೆಆರ್ಎಸ್ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ – ಐವರು ಪ್ರವಾಸಿಗರಿಗೆ ಗಾಯ
Advertisement
ಹಸಿರು ದ್ರಾಕ್ಷಿ – ಕಳೆದ ವಾರ 140 ರಿಂದ 150 ರೂ., ಈಗ 200 ರೂ.
ಸಪೋಟ – ಕಳೆದ ವಾರ 150-160 ರೂ., ಈಗ 200 ರೂ.
ಸೀತಾಫಲ – ಕಳೆದ ವಾರ 60-70 ರೂ. ಇತ್ತು, ಈಗ 100 ರೂ.
ಏಲಕ್ಕಿ ಬಾಳೆಹಣ್ಣು – ಕಳೆದ ವಾರ 80-90ರೂ., ಈಗ 130-140 ರೂ.
ವೀಳ್ಯದೆಲೆ ಕಟ್ಟು – ಕಳೆದ ವಾರ 100-110 ರೂ., ಈಗ 140-160 ರೂ.
ಕಮಲದ ಹೂವು – ಜೋಡಿ 30-40 ರೂ. ಸೇವಂತಿಗೆ – ಕೆಜಿ 280-300 ರೂ.
ಮಲ್ಲಿಗೆ ಕೆಜಿ – ಕಳೆದ ವಾರ 250-300 ರೂ. ಮಾರು 80-100 ರೂ. ಇತ್ತು. ಈಗ 500 ರಿಂದ 600 ರೂ ಇದೆ.
ಕನಕಾಂಬರ – ಕಳೆದ ವಾರ 60 ರಿಂದ 70 ರೂ. ಇತ್ತು. ಈಗ – 100 ರೂ.
ಸ್ಮಾಲ್ ರೋಜ್ – ಕಳೆದ ವಾರ 100-120 ರೂ. ಈಗ ಕೆಜಿಗೆ 200 ರೂ.
ಸೂಜಿ ಮಲ್ಲಿಗೆ – ಕಳೆದ ವಾರ 130 ರಿಂದ 140 ರೂ. ಇತ್ತು. ಈಗ 240 ರೂ.
ಕಲ್ಲಂಗಡಿ – ಕಳೆದ ವಾರ 30-40ರೂ. ಈಗ ಕೆಜಿಗೆ 40-50 ರೂ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?
Web Stories