ಮಂಡ್ಯ: ನಾಗಮಂಗಲ (Nagamangala Violence) ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ನಾಗಮಂಗಲ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ (Ashok Kumar) ಅವರನ್ನು ಅಮಾನತು (Suspend) ಮಾಡಿ ಆದೇಶ ಪ್ರಕಟಿಸಲಾಗಿದೆ.
ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಿ ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ| ಕೇಸ್‌ನಲ್ಲಿ ಹಿಂದೂಗಳು ಟಾರ್ಗೆಟ್ – ಬಿಜೆಪಿ ಆಕ್ರೋಶ
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದು ನಾಗಮಂಗಲ ಪಟ್ಟಣ ಹೊತ್ತಿ ಉರಿದಿತ್ತು. ಕರ್ತವ್ಯ ಲೋಪ, ನಿರ್ಲಕ್ಷತನ ಹಿನ್ನೆಲೆಯನ್ನು ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.