ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ನಡೆದ ಕಲ್ಲು ತೂರಾಟದ (Nagamangala Violence) ವಿಚಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಗಣೇಶೋತ್ಸವ ಸಂದರ್ಭದಲ್ಲಿ ದರ್ಗಾ ಬಳಿ ಗಲಾಟೆ ಆಗಿತ್ತು. ಈ ಬಾರಿ ವ್ಯವಸ್ಥಿತವಾಗಿ ಮುಸಲ್ಮಾನರು ಪ್ಲಾನ್ ಮಾಡ್ಕೊಂಡು ಗಲಾಟೆ ಮಾಡಿದ್ದಾರೆ. ಇದಕ್ಕಾಗಿ ಕಲ್ಲು, ಪೆಟ್ರೋಲ್ ಬಾಂಬ್ ಇಟ್ಟುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Nagamangala Violence| ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರೋತ್ಸಾಹ – ಅಶೋಕ್ ಕಿಡಿ
ಸಿದ್ದರಾಮಯ್ಯ (Siddaramaiah) ನಡೆಸುತ್ತಿರುವುದು ತಾಲಿಬಾನ್ ಸರ್ಕಾರ. ಅವರು ಸಿಎಂ ಆಗಿದ್ದಾಗಲೇ ಹಿಂದೂ ಮುಖಂಡರ ಹತ್ಯೆಗಳಾಗಿವೆ. ಸರಣಿ ಹತ್ಯೆಗಳಾಗಿದ್ದರಿಂದಲೇ ಸಿದ್ದರಾಮಯ್ಯರನ್ನು ಮೈಸೂರಿನ ಜನ ಸೋಲಿಸಿದ್ದರು. ಮುಸ್ಲಿಮರ ಓಲೈಕೆಯೇ ತಮ್ಮಜೀವನದ ಸಿದ್ಧಾಂತ ಎನ್ನುವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕದ ಊರೂರಲ್ಲಿ ಗಣೇಶೋತ್ಸವ ನಡೆಯುತ್ತೆ. ನಾವೂ ಇನ್ಮೇಲೆ ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿದು ಮೆರವಣಿಗೆ ಮಾಡ್ತೀವಿ. ನಮ್ಮ ರಾಜ್ಯದಲ್ಲೂ ಯೋಗಿ ಆದಿತ್ಯನಾಥ್ ರೀತಿಯ ಸರ್ಕಾರ ಬರಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Nagamangala Violence | ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ: ಪರಮೇಶ್ವರ್ ಲಘು ಹೇಳಿಕೆ