Nagamangala Violence | ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲಿ- ರವಿಕುಮಾರ್ ಆಗ್ರಹ

Public TV
2 Min Read
N Ravikumar

ಬೆಂಗಳೂರು: ನಾಗಮಂಗಲ ಗಲಭೆ (Nagamangala Violence) ಕೇಸ್‌ನಲ್ಲಿ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ (N Ravikumar) ಒತ್ತಾಯ ಮಾಡಿದ್ದಾರೆ.

ನಾಗಮಂಗಲ ಪ್ರಕರಣದಲ್ಲಿ ಹಿಂದೂಗಳ ಮೇಲೆ ಕೇಸ್ ಹಾಕಿರೋ ವಿಚಾರಕ್ಕೆ ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ (CM Siddaramaiah) ಸರ್ಕಾರ ಜಾತ್ಯತೀತ ಸರ್ಕಾರ ಎಂದು ಹೇಳುತ್ತೆ, ಸಮಾಜವಾದಿ ಸರ್ಕಾರ ಅಂತ ಹೆಸರಿಗೆ ಮಾತ್ರ ಬಡಬಡಾಯಿಸುತ್ತೆ. ಈ ಸರ್ಕಾರ ಹಿಂದೂಗಳನ್ನ ಹತ್ತಿಕ್ಕುವ ಸರ್ಕಾರ. ನಾಗಮಂಗಲದಲ್ಲಿ ಮುಸ್ಲಿಮರೇ ಕಲ್ಲು ಹೊಡೆದಿದ್ದಾರೆ. ಲಾಂಗ್ ಬೀಸಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮಸೀದಿಯಲ್ಲಿ ಇವೆಲ್ಲ ಹೇಗೆ ಬಂತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡೋದೆ ಒಳ್ಳೇದು – ಜೋಶಿ ಟೀಕೆ

ಅವರು 40 ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಅನೇಕ ಅಂಗಡಿಗಳು ದರೋಡೆ ಆಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಿಂದೂಗಳಿಗೆ ರಕ್ಷಣೆ ಕೊಡದ ಮುಸ್ಲಿಮರನ್ನು ಓಲೈಕೆ ಮಾಡಲು ಈ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸಿಎಂ, ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ಎಸ್ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ- ಬಂಗಾರು ಹನುಮಂತು

ಸಿಎಂ ಸಿದ್ದರಾಮಯ್ಯ ಇದರ ಬಗ್ಗೆ ಇದೂವರೆಗೂ ಮಾತಾಡಿಲ್ಲ. ಪರಮೇಶ್ವರ್ (G Parameshwar) ಸಣ್ಣ ಘಟನೆ ಅಂತಾರೆ. ಈಗ ಹಿಂದೂಗಳನ್ನ ಆರೋಪಿಗಳಾಗಿ ಮಾಡಿದ್ದಾರೆ. ಈ ಘಟನೆ ಆಗಲು ಮುಸ್ಲಿಮರು ಕಾರಣ. ಕಲ್ಲು ಎಸೆದವರು, ಪೆಟ್ರೋಲ್ ಬಾಂಬ್ ಹಾಕಿದವರು ಮುಸ್ಲಿಮರು. ಆದರೆ ಅವರ ಮೇಲೆ ಕೇಸ್ ಹಾಕದೇ ಹಿಂದೂಗಳನ್ನ ಪ್ರಮುಖ ಆರೋಪಿಯಾಗಿ ಮಾಡಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಟ್ರಂಪ್‌ ಜೊತೆ ಚರ್ಚೆ ವೇಳೆ ಕಮಲಾ ಹ್ಯಾರಿಸ್‌ ಬ್ಲೂಟೂತ್‌ ಸಾಧನ ಬಳಸಿದ್ರಾ?

ಕಲ್ಲು ಎಸೆದವರ ಮೇಲೆ ಕೇಸ್ ಮಾಡಬೇಕಿತ್ತು. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಸರ್ಕಾರದ ನಡೆ ನುಡಿ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಬಿಜೆಪಿ ಈಗ ಸತ್ಯಶೋಧನ ಸಮಿತಿ ರಚನೆ ಮಾಡಿದೆ. ಹಿಂದೂಗಳಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ

Share This Article