Nagamangala Violence | ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ: ಪರಮೇಶ್ವರ್‌ ಲಘು ಹೇಳಿಕೆ

Public TV
1 Min Read
nagamangala violence Home Minister Parameshwar Statement

ಬೆಂಗಳೂರು: ನಾಗಮಂಗಲದಲ್ಲಿ(Nagamangala) ಕಲ್ಲು ತೂರಾಟ ಸಂಭವಿಸಿದ್ದು ಸಣ್ಣ ಘಟನೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಲಘು ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಇದು ಸಣ್ಣ ಘಟನೆಯಾಗಿದ್ದು ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು. ಇದನ್ನೂ ಓದಿ: ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿ

 

ನಾಗಮಂಗಲದಲ್ಲಿ ನಿನ್ನೆ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಆಗಿ ಮುಗಿದಿದ್ದು, ಯಾರೂ ಗಾಯಗೊಂಡಿಲ್ಲ. ಆಕಸ್ಮಿಕವಾಗಿ ಅಲ್ಲಿ ಹೋಗುವಾಗ ಕಲ್ಲು ಹಾಕಿದ್ದಾರೆ. ಇವರು ಕಲ್ಲು ಹಾಕಿದ್ದಾರೆ. ಈ ಪ್ರಕರಣಕ್ಕೆ ಜಾಸ್ತಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು.

Share This Article